ಅಂಕೋಲಾ: ತಾಲ್ಲೂಕಿನ ಹಾರವಾಡ ರೈಲ್ವೆ ನಿಲ್ದಾಣದ ಸಮೀಪದ ಕಾರವಾರ ಮಾರ್ಗದ ಗುಡ್ಡದ ಬಳಿ ವೃದ್ದೆಯೋರ್ವಳ ಮೃತ ದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಬೆಳಗಿನ ಅವಧಿಯ ಕರ್ತವ್ಯದಲ್ಲಿದ್ದ ರೈಲ್ವೆ ಟ್ರ್ಯಾಕ್ ಮ್ಯಾನ್ ಸುರಂಗ ಮಾರ್ಗದ ಹಳಿಯಂಚಿನ ಗಟಾರದಲ್ಲಿ ಮೃತ ದೇಹ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
60ರಿಂದ 75 ವರ್ಷದ ಒಳಗಿನ ಮೃತ ದೇಹ ಎಂದು ಅಂದಾಜಿಸಲಾಗಿದೆ. ಮಹಿಳೆಯ ಸಾವಿಗೆ ನಿಖರ ತಿಳಿದು ಬಂದಿಲ್ಲ.
ಅಂಕೋಲಾ ಪಿಎಸ್ಐ ಗೀತಾ ಶಿರ್ಸಿಕರ ಸ್ಥಳ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿ ಸುರೇಂದ್ರ ಹವಾಲ್ದಾರ ,ಸತೀಶ ಅಂಬಿಗ ಮೃತ ದೇಹ ಸಾಗಿಸಲು ಸಹಕರಿಸಿದರು. .