ಜೋಯಿಡಾ : ತಾಲೂಕಿನ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಪಿಂಚಣಿ ಅದಾಲತ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜೋಯಿಡಾ ತಹಶೀಲ್ದಾರ್ ಜುಬೀನ್‌ಮಹಾಪಾತ್ರ ಅವರ ಆದೇಶದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಕಾರ್ಯವನ್ನು ನಡೆಸಲಾಯಿತು.
ಜೋಯಿಡಾ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಜೋಯಿಡಾ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಲಾದ ಈ ಪ್ರಚಾರ ಕಾರ್ಯವು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೋಹನ ಡೊಂಬರ, ಎಂ ಜಿ ಗಟ್ಟಿಮನಿ ನೇತೃತ್ವದಲ್ಲಿ ನಡೆಯಿತು. ಗ್ರಾಮ ಪಂಚಾಯ್ತಿಯ ಲಕ್ಷ್ಮಣ ದೇವಳಿ, ರೆಹಮಾನ್ ನರೇಗಲ್ಲ ಇತರ ಸಿಬ್ಬಂದಿಗಳು ಸಾಥ್ ನೀಡಿದರು. ಈಗಾಗಲೇ ತಿಳಿಸಿದಂತೆ ಜೂನ್ :12 ರಂದು ಕುಂಬಾರವಾಡ ಮತ್ತು ಜೂನ್ :14 ರಂದು ಸೂಪಾ ಹೋಬಳಿಯಲ್ಲಿ ಪಿಂಚಣಿ ಅದಾಲತನ್ನು ಹಮ್ಮಿಕೊಳ್ಳಲಾಗಿದೆ.