ಉತ್ತರಕನ್ನಡ : ಅಂಚೆ ಇಲಾಖೆಯಲ್ಲಿ 42 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ.

ಸಿದ್ದಾಪುರ : ಭಾರತೀಯ ಅಂಚೆ ಇಲಾಖೆಯಲ್ಲಿ ಸುದೀರ್ಘ 42 ವರ್ಷ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗೇಶ್ ಎಚ್ ನಾಯ್ಕ್ ಹೊಸಗದ್ದೆ ಬೇಡ್ಕಣಿ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು
ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ನಾಗೇಶ್ ನಾಯ್ಕ್ ಅವರ ಸೇವೆಯನ್ನು ಸ್ಮರಿಸಿ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಂಚೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾಗೇಶ್ ನಾಯ್ಕ್ ಆಪ್ತರು ಶುಭ ಹಾರೈಸಿದ್ದಾರೆ.