ಸಿದ್ದಾಪುರ : ದೀಪ್ತಿ ವಿನಾಯಕ ಶೇಟ್ ರಾಜ್ಯಕ್ಕೆ 8ನೇ ಸ್ಥಾನ .


ಸಿದ್ದಾಪುರ : 2023 ರ ಎಸ್. ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆ ಯ ವಿದ್ಯಾರ್ಥಿನಿ ಕುಮಾರಿ ದೀಪ್ತಿ ವಿನಾಯಕ ಶೇಟ್ 625/618ಅಂಕ ಗಳಿಸಿ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷನಲ್ಲಿ 4 ಅಂಕ ಹಾಗೂ ವಿಜ್ಞಾನದಲ್ಲಿ 3 ಅಂಕ ಒಟ್ಟು 7 ಅಂಕ ಹೆಚ್ಚಿಗೆ ಪಡೆದು ರಾಜ್ಯಮಟ್ಟದ ರ್ಯಾಂಕ್‌ ಗೆ ಭಾಜನಳಾಗಿದ್ದಾಳೆ. ಈಕೆಯ ಸಾಧನೆಗೆ ಪ್ರಶಾಂತಿ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು, ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.