ಹಳಿಯಾಳ :ಹಳಿಯಾಳದಲ್ಲಿ ಮರಾಠಾ ಸಮಾಜ ಬಾಂಧವರ ಸಭೆ

ಹಳಿಯಾಳ : ತಾಲ್ಲೂಕಿನಲ್ಲಿ ಸಿಂಹಪಾಲಿರುವ ಮರಾಠಾ ಸಮಾಜವನ್ನು ಗ್ರಾಮೀಣ ಭಾಗದ ತಳಮಟ್ಟದಿಂದಲೇ ಸಂಘಟಿಸುವ ಮತ್ತು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ (ಕೆಕೆಎಮ್ ಪಿ) ಅಡಿಯಲ್ಲೇ ಸಮಾಜವನ್ನು ಸಂಘಟಿಸಿ ಬೆಳೆಸುವ ನಿರ್ಣಯವನ್ನು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್‌ ಉತ್ತರ ಕನ್ನಡ ಜಿಲ್ಲಾ ಹಾಗೂ ಹಳಿಯಾಳ ತಾಲೂಕಾ ಘಟಕ ಕೈಗೊಂಡಿತು.

ಪಟ್ಟಣದ ಮರಾಠಾ ಭವನದಲ್ಲಿ ಸಭೆ ಸೇರಿದ ಕೆಕೆಎಮ್ ಪರಿಷತ್ ಸಂಸ್ಥೆಯವರು ಹಾಗೂ ಮರಾಠಾ ಸಮಾಜ ಎಲ್ಲ‌ ಪಕ್ಷ ಹಾಗೂ ವಿವಿಧ ಸಂಘಟನೆಯಲ್ಲಿರುವ ಮುಖಂಡರು ಹಾಗೂ ಹಿರಿಯರು ಸಮಾಜದ ಏಕೀಕರಣದ ದೃಷ್ಟಿಯಲ್ಲಿ ಪಕ್ಷಾತೀತವಾಗಿ ಸಭೆ ನಡೆಸಿದರು.‌

ಸಮಾಜದ ಎಲ್ಲ ಪ್ರಮುಖ ಮುಖಂಡರುಗಳ ಸಭೆಯಲ್ಲಿ ಸಮಾಜದ ಹಿರಿಯ ಮುಖಂಡ ಪ್ರಕಾಶ ಫಾಕ್ರಿ ಇವರನ್ನು ಕೆಕೆಎಮ್ ಪಿಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಮತ್ತು ಚೂಡಪ್ಪ ಬೊಬಾಟಿ ಇವರನ್ನು ಹಳಿಯಾಳ ತಾಲೂಕಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಹಾಗೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯನ್ನು ರಾಜ್ಯ ಉಪಾಧ್ಯಕ್ಷರಾದ ನಾಗೇಂದ್ರ ಜಿವೋಜಿ ಘೋಷಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೊಬಾಟಿ ಎರಡೂ ಮುಖಂಡರುಗಳಿಗೆ ಮಾಲಾರ್ಪಣೆ ಮಾಡಿ ಶುಭಕೋರಿದರು.

ಸಮಾಜದ ಮುಖಂಡರಾದ ಮಾಜಿ ಸೈನಿಕರಾದ ಅಶೋಕ ಮಿರಾಶಿ, ಪ್ರಮುಖರಾದ ಸುಭಾಷ ಕೊರ್ವೆಕರ, ಗಣಪತಿ ಕರಂಜೇಕರ, ಶಿವಾಜಿ ನರಸಾನಿ , ಸಂತೋಷ ಮಿರಾಶಿ, ಚಂದ್ರಕಾಂತ ಕಮ್ಮಾರ, ಅನಿಲ ಚವ್ಹಾಣ,
ತಾನಾಜಿ ಪಟ್ಟೆಕರ ಮಾತನಾಡಿ ಹಲವು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ರವಿ ಚಿಬ್ಬುಲಕರ, ನಾರಾಯಣ ಘಾಡೇಕರ, ತುಕಾರಾಮ ಪಟ್ಟೆಕಾರ, ಸಂಜು ಕೋಳೂರ,ಯೋಗರಾಜ ಎಸ್ ಕೆ, ಆನಂದ ಕಂಚನಾಳಕರ ಪ್ರಮುಖರು ಉಪಸ್ಥಿತರಿದ್ದರು.