ಸಿದ್ದಾಪುರ : ಬಹಳ ಕಾಲದಿಂದ ಎರಡನೇ ಹಂತದ ನಾಯಕರು ಬೆಳೆಯಲೇ ಇಲ್ಲಾ ಸಮಾಜದಲ್ಲಿ ಎರಡನೇ ತಲೆಮಾರಿನ ನಾಯಕರು ಬೆಳೆಯುವುದು ಅವಶ್ಯವಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು
ಅವರು ಕುಮಟಾದ ನಾಮಧಾರಿ ಸಭಾಭವನದಲ್ಲಿ ಸಮಾಜದ ಗುರುಗಳಾದ ಪ್ರಾಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಚಿಂತನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು
ಯಾರೋ ನಮ್ಮನ್ನು ಉದ್ದಾರ ಮಾಡುತ್ತಾರೆ ಎನ್ನುವ ಆಲೋಚನೆಯಿಂದ ಹೊರ ಬರಬೇಕು, ನಮ್ಮ ಕೆಲಸಗಳು ಆಗದಿರಲು ಅನೇಕ ಬಾರಿ ಬೇರೆಯವರು ಕಾರಣ ಎಂದು ಹೇಳುತ್ತಾರೆ ಅದನ್ನ ಬಿಟ್ಟು ನಾವೇ ಪ್ರಯತ್ನ ಪಡಬೇಕು ಆಗ ಮಾತ್ರ ಗುರಿ ತಲುಪಲು ಸಾಧ್ಯ ಎಂದರು
ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ನಮ್ಮಲ್ಲಿರುವ ಆಂತರಿಕ ಸಮಸ್ಯೆಗಳನ್ನು ದೂರ ಮಾಡಿ ಭಿನ್ನಾಭಿಪ್ರಾಯ ಒಗ್ಗಟಿಸಿ ಏಕತೆಯ ಪ್ರದರ್ಶಿಸುವ ಮೂಲಕ ಕೆಳ ವರ್ಗದವರನ್ನು ಜೊತೆಯಲ್ಲಿ ಕೊಂಡೊಯುವದರೊಂದಿಗೆ ಮುನ್ನೆಡೆಯ ಬೇಕಿದೆ ಎಂದರು.
ಜಿಲ್ಲಾ ಅಧ್ಯಕ್ಷ ವೀರಭದ್ರ ನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು ರಾಜ್ಯ ಉಪಾಧ್ಯಕ್ಷ ವಸಂತ ನಾಯ್ಕ್ ಹಾಗೂ ಉಡುಪಿ,ಮಂಗಳೂರು ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಂದ ಪದಾಧಿಕಾರಿಗಳು ಉಪಸ್ಥಿತರಿದ್ದರು.