ಇಸ್ಲಾಮಾಬಾದ್: ಮನುಷ್ಯನ ಮೇಲೆ ಎಂತೆಂತಹ ಜೀವಿಗಳು, ವೈರಸ್ & ಬ್ಯಾಕ್ಟೀರಿಯಾ ದಾಳಿ ನಡೆಸುತ್ತವೋ ದೇವರೇ ಬಲ್ಲ. ಅದರಲ್ಲೂ ಆಧುನಿಕ ಜಗತ್ತಿನಲ್ಲಿ ಮನುಷ್ಯನೇ ಈ ರೀತಿ ಅಪಾಯಕಾರಿ ವೈರಸ್ ಸೃಷ್ಟಿ ಮಾಡಿ ತನ್ನ ನಾಶಕ್ಕೆ ತಾನೇ ಸಿದ್ಧವಾಗಿದ್ದಾನೆ. ಈಗ ಮೆದುಳು ತಿನ್ನುವ ‘ಹುಳು’ಗಳ ಕಾಟಕ್ಕೆ ಪಾಕಿಸ್ತಾನ ದೇಶದಲ್ಲಿ ಹಲವರ ಜೀವ ಹೋಗಿದೆ.
ಮೊನ್ನೆ ಮೊನ್ನೆ ತಾನೆ ಪಾಕಿಸ್ತಾದಲ್ಲಿ ಯುವಕನೊಬ್ಬ ಮೆದುಳು ತಿನ್ನುವ ‘ಹುಳು’ ಅಂದ್ರೆ ‘ನಾಗ್ಲೆರಿಯಾ ಫೌಲೆರಿ’ ಎಂಬ ರೋಗಕ್ಕೆ ಬಲಿಯಾಗಿದ್ದ. ಆದರೆ ಇದೀಗ ಮತ್ತೊಂದು ಶಾಕ್ ಕೊಡುವ ಸುದ್ದಿಯನ್ನ ಪಾಕಿಸ್ತಾನ ಆರೋಗ್ಯ ಇಲಾಖೆ ರಿವೀಲ್ ಮಾಡಿದೆ. ಅಂದ್ರೆ ಇದೀಗ ಪಾಕಿಸ್ತಾನದಲ್ಲಿ ಮೆದುಳು ತಿನ್ನುವ ‘ಹುಳು’ಗೆ ಬಲಿಯಾಗುತ್ತಿರುವ ಜನರ ಸಂಖ್ಯೆ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಆ ಬಗ್ಗೆ ಸ್ಫೋಟಕ ಮಾಹಿತಿ ಇಲ್ಲಿದೆ.
ಒಂದೇ ವಾರದಲ್ಲಿ ಇಬ್ಬರು ಬಲಿ!
ಪಾಕಿಸ್ತಾನ ಎಂಬ ನರಕದಂತಹ ದೇಶದಲ್ಲಿ ಎಲ್ಲವೂ ಅಯೋಮಯ. ಅದರಲ್ಲೂ ಅಲ್ಲಿನ ರಾಜಕಾರಣಿಗಳ ನಡುವಿನ ಕಿತ್ತಾಟಕ್ಕೆ ದೇಶ ಹಾಳಾಗಿ ಹೋಗುತ್ತಿದೆ. ಅದೇ ರೀತಿ ಪಾಕ್‌ನ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಹೀಗಾಗಿ ಅಲ್ಲಿ ‘ನಾಗ್ಲೆರಿಯಾ ಫೌಲೆರಿ’ ಅಥವಾ ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಕಳೆದ 1 ವಾರದ ಅವಧಿಯಲ್ಲಿ ಇಬ್ಬರು ಇದೇ ರೋಗಕ್ಕೆ ಬಲಿಯಾಗಿದ್ದಾರಂತೆ.
ನರಳಾಡಿ ಪ್ರಾಣಬಿಟ್ಟ ಮಹಿಳೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಓರ್ವ ಮಹಿಳೆ ಹಾಗೂ 45 ವರ್ಷದ ಪುರಷ ಮೆದುಳು ತಿನ್ನುವ ‘ಹುಳು’ ಕಾಟಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ ಮಹಿಳೆಯನ್ನ ಉಳಿಸಿಕೊಳ್ಳಲು ಪಾಕಿಸ್ತಾನದ ಆರೋಗ್ಯ ಇಲಾಖೆ ಸಾಕಷ್ಟು ಪ್ರಯತ್ನಪಟ್ಟಿದೆ. ಆದರೆ ಈ ರೋಗಕ್ಕೆ ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ ಇಲ್ಲ. ಹೀಗಾಗಿ ನರಳಾಡಿ, ನರಳಾಡಿ ಮಹಿಳೆ ಪ್ರಾಣಬಿಟ್ಟಿದ್ದಾಳೆ. ಅದೇ ರೀತಿ 45 ವರ್ಷ ವಯಸ್ಸಿನ ಪುರುಷ ಕೂಡ ಇದೇ ರೋಗಕ್ಕೆ ಬಲಿಯಾಗಿದ್ದಾನೆ.