ಅಂಕೋಲಾ : ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಯ ರಕ್ಷಣಾ ಮತ್ತು ನಾಗರೀಕ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿಸಿದ್ದು,ಯಾವುದೇ ಪೂರ್ವ ಸೂಚನೆ ನೀಡದೆಯೇ ತಹಶಿಲ್ದಾರ ಹಾಗೂ ತಂಡ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಸ್ಥಳೀಯರ ತೀವ್ರ ವಿರೋಧದಿಂದಾಗಿ ಸರ್ವೇಕಾರ್ಯ ಸ್ಥಗೀತಗೊಳಿಸಿದ ಘಟನೆ ನಡೆದಿದೆ.
ಉಪವಿಭಾಧಿಕಾರಿ ಸೂಚನೆಯ ಮೇರೆಗೆ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ ನೇತೃತ್ವದ ತಂಡ ಸಂಪೂರ್ಣ ಪೋಲಿಸ್ ಬಲದೊಂದಿಗೆ ಸರ್ವೇ ಕಾರ್ಯ ಪ್ರಾರಂಭಿಸಿದ್ದು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯರು ಸ್ಥಳಕ್ಕಾಗಮಿಸಿದ್ದಾರೆ. ಈಗಾಗಲೇ ರಕ್ಷಣಾ ಇಲಾಖೆಗಾಗಿ ನೂರಾರು ಎಕರೆ ಬಂಗಾರದಂತ ಭೂಮಿಯನ್ನು ಕವಡೆ ಕಾಸಿನ ಬೆಲೆಗೆ ನೀಡಿದ್ದೇವೆ. ಈಗ ಮತ್ತೆ ಪ್ರದೇಶದಲ್ಲಿ ಸುಮಾರು 97 ಎಕರೆ ಜಾಗವನ್ನು ತಮ್ಮ ಸುಪರ್ದಿಗೆ ಪಡೆಯಲು ಬಂದಿದ್ದಾರೆ. ಗ್ರಾಮಸ್ಥರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ತಾವು ಹೇಗೆ ಬೇಕಾದರೂ ಇವರನ್ನು ಬಳಸಿಕೊಳ್ಳಬಹುದು ಎನ್ನುವಂತೆ ಸರ್ವೇ ಕಾರ್ಯ ನೆಡೆಸಿದ್ದು ಶೋಚನೀಯ