ಸಿದ್ದಾಪುರ : (ಉತ್ತರ ಕನ್ನಡ ) : ಕ್ರಿಕೆಟ್ ಮಾನಸಿಕವಾಗಿ ಹಾಗೂ ದೈಹಿಕವಾಗಿ ಮತ್ತು ಆರೋಗ್ಯವಂತರಾಗಲು ಸಹಾಯಕಾರಿ : ರಾಜು ರಾಯ್ಕರ್.

ಸಿದ್ದಾಪುರ : ಕ್ರಿಕೆಟ್ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದರಿಂದ ನಮ್ಮ ಶಕ್ತಿಯನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ನೆಮ್ಮದಿಯಿಂದ ಇರಲು ಸಹಕಾರಿಯಾಗಲಿದೆ ಮತ್ತು ಮನಸ್ಸಿನ ಸಕರಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ.ಕ್ರಿಕೆಟ್ ಒಂದು ಮೋಜಿನ ಆಟವಾಗಿದ್ದು ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ ಎಂದು ಯೋಗ ಶಿಕ್ಷಕ ರಾಜು ರಾಯ್ಕರ್ ಅಭಿಪ್ರಾಯ ಪಟ್ಟರು.ಅವರು ಸಿದ್ದಾಪುರದ ತಾಲೂಕ ಕ್ರೀಡಾಂಗಣದಲ್ಲಿ,ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಡಾಲ್ಫಿನ್ ಕ್ರಿಕೆಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಿಕೆಟ್ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಮತ್ತು ಆರೋಗ್ಯವಂತರಾಗಲು ಕ್ರಿಕೆಟ್ ಅತ್ಯಂತ ಉತ್ತಮ ಆಟವಾಗಿದೆ ಹಾಗೂ ಇಂದಿನ ಮಕ್ಕಳು ಮೊಬೈಲ್ ನಲ್ಲಿ ಕಾಲ ಕಳೆಯುವ ಬದಲು ಇಂತಹ ಕ್ರಿಕೆಟ್ ಆಡುವುದು ಸೂಕ್ತ ಎಂದರು. ಅಕಾಡೆಮಿ ಅಧ್ಯಕ್ಷ ವಿನಾಯಕ್ ಎಸ್ ಶೇಟ್ ಮಾತನಾಡಿ ಕ್ರಿಕೆಟ್ ಶಿಬಿರದಿಂದ ಎಲ್ಲಾ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದವರೆಗೂ ಬೆಳೆಯಲಿ ಎಂದು ಶುಭ ಹಾರೈಸಿದರು. ರಾಜ್ಯಮಟ್ಟದ ಕ್ರಿಕೆಟ್ ತರಬೇತುದಾರ ಅಕಾಡೆಮಿ ನಿರ್ದೇಶಕ ಡೊಮಿನಿಕ್ ಫರ್ನಾಂಡಿಸ್ ಪ್ರಾಸ್ತಾವಿಕ ಮಾತನಾಡಿ ಈಗಾಗಲೇ 34 ದಿನದ ತರಬೇತಿ ಶಿಬಿರ ನೀಡಿದ್ದು ಇನ್ನು ಮುಂದೆಯೂ ಸಹ ಕ್ರಿಕೆಟ್ ಆಟದ ತರಬೇತಿಯನ್ನು ಮುಂದುವರಿಸಲಾಗುವುದು ಹಾಗೂ ಆಟದ ಜೊತೆಗೆ ದೈಹಿಕ ವ್ಯಾಯಾಮದ ತರಬೇತಿ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಳೆದ 15 ವರ್ಷದಿಂದ ಚೀನಾದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೊರಬದ ಜಡೆ ಗ್ರಾಮದ ರಾಜು ರಾಯ್ಕರ್ ರವರನ್ನು ವಿಶೇಷವಾಗಿ ಗೌರವಿಸಲಾಯಿತು. ಶಿಬಿರದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶಿಬಿರದ ಕುರಿತು ನಾಗೇಶ್ ಫೈ ಬಿಳಗಿ, ಹರ್ಷ ಭಟ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕ ಪ್ರಶಾಂತ ಶೇಟ್,ಸಂತೋಷ್ ನೇತಲ್ಕರ್ ಕಾರವಾರ,ರಾಘವೇಂದ್ರ ಕೆ ರೇವಣಕರ್, ಸಂಕೇತ ಅಂಬಿಗ,ಆದಿತ್ಯ ನಾಯಕ್ಉಪಸ್ಥಿತರಿದ್ದರು.ಡಾಲ್ಫಿನ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ರಘುವೀರ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.