ಪುಸ್ತಕಗಳು ನಮ್ಮ ಜ್ಞಾನವನ್ನು ಹೆಚ್ಚಿಸಲು ಇರುವ ಸಾಧನ. ಮೊಬೈಲ್ ನಿಂದ ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಪ್ರತಿನಿತ್ಯವೂ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದು ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್. ಕೆ. ಭಾಗವತ್ ಹೇಳಿದರು.
ಅವರು ನಗರದ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ.ಕ್ಯೂ ಎ. ಸಿ ಮತ್ತು ಗ್ರಂಥಾಲಯ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದರ ಮೂಲಕ ವಿದ್ಯಾರ್ಥಿಗಳು ಜ್ಞಾನಶೀಲರಾಗಬೇಕು. ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಪುಸ್ತಕಗಳ ಪಾತ್ರ ಮಹತ್ತರವಾಗಿದೆ. ಪ್ರತಿನಿತ್ಯವೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ ಹೆಗಡೆ ಮುಳಖಂಡ ಮಾತನಾಡಿ, ಬದುಕಿನ ಪ್ರತಿ ಘಟ್ಟದಲ್ಲಿ ಓದು ಅತ್ಯವಶ್ಯಕ. ಅರಿವೇ ಗುರು ಎಂಬ ಮಾತಿನಂತೆ ಪುಸ್ತಕಗಳನ್ನು ಓದಿ ನಮ್ಮ ಬೌದ್ಧಿಕ ಮಟ್ಟವನ್ನ ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು.
ಪ್ರಾಸ್ತಾನಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಓದು ಎನ್ನುವುದು ಒಂದು ಸಂಸ್ಕೃತಿ ಇದ್ದಂತೆ. ಅದನ್ನು ಸದಾ ಮುಂದುವರಿಸಿಕೊಂಡು ಹೋಗಬೇಕು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಹೊರಬಂದು ಪುಸ್ತಕಗಳನ್ನು ಓದುವ ಆಸಕ್ತಿ ಮಕ್ಕಳಲ್ಲಿ ಮೂಡಬೇಕು ಎಂದರು.
ಪ್ರೊ.ವಿಜಯ್. ಎ ಸ್ವಾಗತಿಸಿದರು. ಪ್ರೊ ಪ್ರಮೋದ್ ನಾಯ್ಕ್ ನಿರೂಪಿಸಿದರು. ಗ್ರಂಥಪಾಲಕಿ ಶಾರದಾ ಭಟ್ ವಂದಿಸಿದರು.