ಜೋಯಿಡಾ : ಪ್ರಕೃತಿ ಸಂಪತ್ತಿನ ಹಸಿರ ತಾಲ್ಲೂಕು ಮತ್ತು ವಿಸ್ತೀರ್ಣದಲ್ಲಿ ಅತೀ ದೊಡ್ಡ ತಾಲ್ಲೂಕು ಎಂಬ ಗೌರವಕ್ಕೆ ಪಾತ್ರವಾಗಿರುವ ಜೋಯಿಡಾ ತಾಲ್ಲೂಕಿಗೆ ತಾಲ್ಲೂಕು ಕೇಂದ್ರದಲ್ಲಿ ಈಗಿರುವ ತಹಶೀಲ್ದಾರ್ ಕಚೇರಿಯ ಹತ್ತಿರದಲ್ಲೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಾಲ್ಲೂಕು ಆಡಳಿತ ಸೌಧದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಜೋಯಿಡಾ ತಾಲ್ಲೂಕಿಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಈ ಆಡಳಿತ ಸೌಧ ನಿರ್ಮಾಣಗೊಳ್ಳುತ್ತಿದೆ. ಆರ್.ವಿ.ದೇಶಪಾಂಡೆಯವರ ವಿಶೇಷ ಪ್ರಯತ್ನದಡಿ ಈ ಆಡಳಿತ ಸೌಧ ಕಟ್ಟಡ ಮಂಜೂರುಗೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹದು.