ದಾಂಡೇಲಿ : ನಗರದ ಪ್ರತಿಭಾವಂತ ಹಾಗೂ ಯುವ ನಿರ್ದೇಶಕ ಮನೋಹರ್ ಕಾಂಬಳೆಯವರು ಇತ್ತೀಚೆಗೆ ಗೋವಾದಲ್ಲಿ ನಡೆದ 2023ರ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಿರ್ದೇಶಕ ವಿಭಾಗದಲ್ಲಿ ಅತ್ಯುತ್ತಮ ಕಿರು ಚಿತ್ರ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಗರದ ಅಭ್ಯಂತಾ ಯೂತ್ಸ್ ಕ್ರಿಯೇಷನ್ಸ್ ನಿರ್ಮಾಣದ ಸೂಸೈಡ್-ದಿ ಲಾಸ್ಟ್ ಅಟೆಂಟ್ಟ್ ಚಿತ್ರಕ್ಕೆ ಬ್ಯಾಂಕಾಕ್ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡ ಮನೋಹರ್ ಕಾಂಬಳೆಯವರಿಗೆ ಇದೀಗ ಅತ್ಯುತ್ತಮ ಕಿರು ಚಿತ್ರ ನಿರ್ದೇಶಕ ಪ್ರಶಸ್ತಿಗೆ ಪ್ರಾಪ್ತವಾಗಿದೆ.
ಗೋವಾದ ಪಣಜಿಯಲ್ಲಿ ನಡೆದ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಸೂಸೈಡ್-ದಿ ಲಾಸ್ಟ್ ಅಟೆಂಟ್ಟ್ ಚಿತ್ರವನ್ನು ಪ್ರದರ್ಶಿಸಲಾಯ್ತು. ಆನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋವಾ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಸುಭಾಷ್ ಪಾಲ್ ದೇಸಾಯಿ, ಮಾಜಿ ಮೇಯರ್ ಉದಯ್ ಮಡಿಕೇರ್, ಕನ್ನಡದ ನಟಿ ಅನು ಪ್ರಭಾಕರ್, ಗಣ್ಯರಾದ ಗುರುದೀಪ್ ಸಿಂಗ್, ಸುಗ್ಗಲ ಯಲ್ಮಲಿ, ರಾಜೇಶ್, ಜಯಪ್ರಭು ಲಿಂಗಾಯತ್ ಮೊದಲಾದವರ ಉಪಸ್ಥಿತಿಯಲ್ಲಿ ಯುವ ನಿರ್ದೇಶಕ ಮನೋಹರ್ ಕಾಂಬಳೆಯವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯ್ತು.
ಈ ಸಂದರ್ಭದಲ್ಲಿ ಅಭ್ಯಂತಾ ಯೂತ್ಸ್ ಕ್ರಿಯೇಷನ್ಸ್ ತಂಡದ ಚಂದ್ರಕಾಂತ್ ಗಾಡಿವಡ್ಡರ್, ಭೀಮರಾಜ ಮಡ್ಡೆ, ಈಶ್ವರ್ ನಿಂಬಾಳ, ಮುತ್ತುರಾಜ ಯಲಬುರ್ಗಿ ಮೊದಲಾದವರು ಉಪಸ್ಥಿತರಿದ್ದರು.