ಜೋಯಿಡಾ:ಜೋಯಿಡಾ ತಾಲ್ಲೂಕಿನ ರಾಮನಗರದಲ್ಲಿ ಟ್ರಕ್ ಪಲ್ಟಿ

ಜೋಯಿಡಾ : ತಾಲ್ಲೂಕಿನ ರಾಮನಗರ ಸಮೀಪದ ಗಾರ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ಕೊಂದು ಪಲ್ಟಿಯಾದ ಘಟನೆ ಇಂದು ಗುರುವಾರ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಗೋವಾದಿಂದ ಹುಬ್ಬಳ್ಳಿಗೆ ಈ ಟ್ರಕ್ ತೆರಳುತ್ತಿತ್ತು ಎನ್ನಲಾಗಿದೆ.

ರಾಮನಗರದ ಹತ್ತಿರದಲ್ಲಿರುವ ಗಾರ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಗಟಾರಕ್ಕೆ ಪಲ್ಟಿಯಾಗಿದೆ. ಸ್ಥಳಕ್ಕೆ ರಾಮನಗರದ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.