ಕೇಂದ್ರ ಸರ್ಕಾರ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್ ಟಿ ತಂದಿರುವುದರಿಂದ ನಾಳೆಯಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.
1 ರಿಂದ 3 ರೂ. ವರೆಗೆ ಏರಿಕೆ.!
ನಾಳೆಯಿಂದ ಹಾಲಿನ ಉತ್ಪನ್ನಗಳ ಬೆಲೆ 1 ರಿಂದ 3 ರೂಪಾಯಿವರೆಗೆ ಏರಿಕೆಯಾಗಲಿದೆ. 1 ಲೀಟರ್ ಮೊಸರಿಗೆ 43 ರೂ ಇದ್ದು 46 ರೂ.ಗೆ ಏರಿಕೆಯಾಗಲಿದೆ. ಅರ್ಧ ಲೀಟರ್ ಮೊಸರಿಗೆ 22 ರೂ. ಇದ್ದು 24 ರೂ. ಆಗಲಿದೆ. ಇನ್ನು ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಹಾಗೂ ಲಸ್ಸಿ ಬೆಲೆಯಲ್ಲಿ 1 ರೂ ಏರಿಕೆಯಾಗಲಿದೆ.
ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಕೇವಲ ಹಾಲಿನ ಉತ್ಪನ್ನಗಳಿಗೆ ಮಾತ್ರ ಬೆಲೆ ಏರಿಕೆ ಬಿಸಿ ತಟ್ಟಲಿದ್ದು ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಸ್ಥೆ ತಿಳಿಸಿದೆ. ನಾಳೆಯಿಂದ ಹೊಸ ದರದಲ್ಲಿ ಮೊಸರು, ಮಜ್ಜಗೆ, ಲಸ್ಸಿ ಮಾರಾಟವಾಗಲಿದೆ. ಪ್ಯಾಕೇಟ್ ಮೇಲೆ ಹಳೆಯ ದರವೇ ಇರಲಿದ್ದು, ಗ್ರಾಹಕರು ಹೊಸ ದರವನ್ನ ನೀಡುವಂತೆ ಕೆ ಎಂಎಫ್ ಮನವಿ ಮಾಡಿದೆ.