ಬೆಳೆಗಳಿಗೆ ನೀರಿಲ್ಲದೆ ಕೃಷಿಕರು ಕಂಗಾಲು | ಶೀಘ್ರ ಮಳೆಯಾಗದಿದ್ದರೆ ಹೆಚ್ಚಲಿದೆ ಹಾಹಾಕಾರ|ಬರಿದಾಗಿದೆ ವರದೆಯ ಒಡಲು

ಶಿರಸಿ:- ಬಿಸಿಲ ಬೇಗೆಯಿಂದ ಇದೀಗ ಬಹುತೇಕ ಭಾಗದಲ್ಲಿ ನದಿ, ಕೆರೆ-ಬಾವಿಗಳು ಬತ್ತುತ್ತಿದ್ದರೆ ಇತ್ತ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶವಾದ ಬನವಾಸಿಯ ಜೀವ ನದಿಯಾದ ವರದಾ ನದಿಯೂ ಬಹುತೇಕ ಬತ್ತಿ ಹೋಗಿದ್ದು ,ಕುಡಿಯುವ ನೀರಿಗೂ ಹಾಹಾಕಾರ ಎಂಬAತಾಗಿದೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾಲೂಕಿನಲ್ಲಿ ಈ ಬಾರಿ ಬಹುಬೇಗನೆ ನದಿ,ಕೆರೆ,ಬಾವಿಗಳು ಬತ್ತಿ ಹೋಗಿ ನೀರಿನ ಸಮಸ್ಯೆ ಕಾಡುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ವರದಾನವಾಗಿದ್ದ ವರದಾ ನದಿಯು ಸಂಪೂರ್ಣ ಬತ್ತಿದ್ದು ,ಸುತ್ತ ಮುತ್ತಲಿನ ಜನರಲ್ಲಿ ಆತಂಕ ಎದುರಾಗಿದೆ. ಬನವಾಸಿ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ವರದಾ ನದಿಯ ನೀರು ಸಂಪೂರ್ಣ ಬತ್ತಿಹೋಗಿದ್ದು , ಪಟ್ಟಣಕ್ಕೆ ನೀರು ಪೂರೈಕೆಗೆ ಸಮಸ್ಯೆ ಎದುರಾಗಿದೆ. ವರದಾ ನದಿಗೆ ೩-೪ ಚೆಕ್ ಡ್ಯಾಂ ಗಳನ್ನು ನಿರ್ಮಿಸಲಾಗಿದ್ದು , ಎಲ್ಲ ಕಡೆ ನೀರಿಗೆ ಕೊರತೆಯುಂಟಾಗಿದೆ. ಸಂಪೂರ್ಣ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಕಾಡುತ್ತಿದೆ.
ನದಿ,ಕೆರೆ,ಕೊಳವೆ ಬಾವಿ ಹಾಗೂ ಬಾವಿಗಳನ್ನು ನಂಬಿಕೊAಡಿದ್ದ ಕೃಷಿಕರು ಈ ಬಾರಿ ಕಂಗಾಲಾಗಿದ್ದಾರೆ.ಕುಡಿಯುವ ನೀರಿಗಾಗಿ ಪರಿತಪಿಸುವ ಹೊತ್ತಿನಲ್ಲಿ ಕೃಷಿಗೆ ನೀರು ಉಣಿಸಲು ಕೃಷಿಕರು ಪರದಾಡುತ್ತಿದ್ದಾರೆ.ನದಿಯನ್ನು ನಂಬಿದ ಕೃಷಿಕರ ಅಡಕೆ,ಫೈನಾಪಲ್,ಶುಂಠಿ ,ಬಾಳೆ,ಜೋಳ ಸೇರಿದಂತೆ ಬಹುತೇಕ ಬೆಳೆಗಳೂ ಬಾಡಿ ಹೋಗುತ್ತಿವೆ. ನದಿಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ತುಂಬಿರುವ ನೀರನ್ನು ಬಳಸುವ ಪರಿಸ್ಥಿತಿ ಎದುರಾಗಿದೆ. ಹೀಗೆಯೇ ಒಂದೆರಡು ವಾರ ಕಳೆದರೆ ನದಿಯೂ ಸಂಪೂರ್ಣ ಬತ್ತಿ ಹೋಗಿ ಕೃಷಿ ಚಟುವಟಿಕೆಗೂ ನೀರಿಲ್ಲದೆ,ಪರದಾಡುವ ಪರಿಸ್ಥಿತಿ ಉಂಟಾಗುವುದು ನಿಶ್ಚಿತ.