
ಬೆಂಗಳೂರು, ಏಪ್ರಿಲ್ 18: ಚಿನ್ನದ ಬೆಲೆ ಸತತ ನಾಲ್ಕನೇ ದಿನ ಏರಿಕೆ ಆಗಿದೆ. ಇಂದು ಶುಕ್ರವಾರ ಒಂದು ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 25 ರೂ ಹೆಚ್ಚಳವಾಗಿದೆ. ನಿನ್ನೆ ಮತ್ತು ಮೊನ್ನೆ ಚಿನ್ನದ ಬೆಲೆ ಬರೋಬ್ಬರಿ 200 ರೂಗಳಷ್ಟು ಏರಿಕೆ ಆಗಿತ್ತು. ಆಭರಣ ಚಿನ್ನದ ಬೆಲೆ 8,920 ರೂನಿಂದ 8,945 ರೂಗೆ ಏರಿದೆ. ಶುದ್ಧ ಚಿನ್ನದ ಬೆಲೆ 9,758 ರೂಗೆ ಏರಿದೆ. ವಿದೇಶಗಳಲ್ಲಿ ಚಿನ್ನದ ಬೆಲೆ ಇವತ್ತು ಹೆಚ್ಚಳ ಕಂಡಿಲ್ಲ. ಕೆಲವೆಡೆ ಬೆಲೆ ತುಸು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಏರುಪೇರು ಕಡಿಮೆ.

ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,450 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 18ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,580 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,190 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,450 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,580 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 89,450 ರೂ
- ಚೆನ್ನೈ: 89,450 ರೂ
- ಮುಂಬೈ: 89,450 ರೂ
- ದೆಹಲಿ: 89,600 ರೂ
- ಕೋಲ್ಕತಾ: 89,450 ರೂ
- ಕೇರಳ: 89,450 ರೂ
- ಅಹ್ಮದಾಬಾದ್: 89,500 ರೂ
- ಜೈಪುರ್: 89,600 ರೂ
- ಲಕ್ನೋ: 89,600 ರೂ
- ಭುವನೇಶ್ವರ್: 89,450 ರೂ


