ಸ್ಯಾಂಡಲ್​​ವುಡ್​ನ ಹಿರಿಯ ನಟ ಲಕ್ಷ್ಮಣ್ ನಿಧನ

ಸ್ಯಾಂಡಲ್​​ವುಡ್​ನ ಹಿರಿಯ ಖಳನಟ ಲಕ್ಷ್ಮಣ್ (74) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೂಡಲಪಾಳ್ಯದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಲಕ್ಷ್ಮಣ್ ಅವರು 200 ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಕನ್ನಡದ ಖ್ಯಾತ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್,ಅಂಬರೀಶ್ ಸೇರಿದಂತೆ ಹಲವು ಸ್ಯಾಂಡಲ್‌ವುಡ್‌ ದಿಗ್ಗಜ‌ರೊಂದಿಗೆ ಲಕ್ಷ್ಮಣ್ ​ತೆರೆ ಹಂಚಿಕೊಂಡಿದ್ದರು. ಲಕ್ಷ್ಮಣ್​ ನಿಧನಕ್ಕೆ ಸ್ಯಾಂಡಲ್​​ವುಡ್ ಸೆಲೆಬ್ರಿಟಿಗಳು ಹಾಗೂ ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.