ಮುಂಬೈ: ಕಲ್ವರಿ ದರ್ಜೆಯ ಐದನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ವಾಗಿರ್ ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಯಾಗಿದೆ. ಇದರೊಂದಗೆ ಭಾರತೀಯ ನೌಕಾಪಡೆಯ ಶಕ್ತಿ ಹೆಚ್ಚಿದೆ.
ಐಎನ್‌ಎಸ್ ವಾಗಿರ್ ಅನ್ನು ಫ್ರಾನ್ಸ್ ತಂತ್ರಜ್ಞಾನದೊಂದಿಗೆ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಉಪಸ್ಥಿತಿಯಲ್ಲಿ ಜಲಾಂತರ್ಗಾಮಿ ನೌಕೆ ಸೇರ್ಪಡೆಗೊಂಡಿದೆ. ಐಎನ್‌ಎಸ್ ವಾಗಿರ್ ಜಗತ್ತಿನ ಅತ್ಯುತ್ತಮ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಶತ್ರುಗಳ ದಾಳಿ ತಡೆಯಲು, ಸಾಗರದಲ್ಲಿ ಭಾರತದ ರಕ್ಷಣೆಯ ಬಲವರ್ಧನೆಗೆ, ಗುಪ್ತಚರ ಹಾಗೂ ನಿಗಾ ವಹಿಸಲು ನೆರವಾಗಲಿದೆ.