ಭಟ್ಕಳ: ರೈಲ್ವೆ ನಿಲ್ದಾಣ ಸಮೀಪದ ನಾಗಮಾಸ್ತಿ ಹೊಳೆಯಲ್ಲಿ ಪತ್ತೆಯಾದ ಭಿಕ್ಷುಕನ ಅನಾಥ ಶವವನ್ನು ಪೊಲೀಸ್ ಸಿಬ್ಬಂದಿ ಹಾಗೂ ಸಮಾಜ ಸೇವಕ ಮಂಜು ಮುಟ್ಟಳ್ಳಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಹರಿಯಾಣ ಮೂಲದ ಬಾಲ ಚಂದ್ರಾನಂದ ಎನ್ನುವ ಭಿಕ್ಷುಕ ಭಟ್ಕಳ ರೈಲ್ವೆ ನಿಲ್ದಾಣ ಸಮೀಪದ ನಾಗಮಾಸ್ತಿ ಹೊಳೆಯಲ್ಲಿ ಬಿದ್ದು ಸಾವನ್ನಪ್ಪಿದ್ದನು. ಈತ ತಾಲೂಕಿನ ಸುತ್ತ ಮುತ್ತ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ. ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ ವೇಳೆ ಬಿದ್ದು ಸಾವನ್ನಪ್ಪಿದ್ದನು.
ಭಿಕ್ಷುಕನ ಮೃತ ದೇಹವನ್ನು ನಾಲ್ಕು ದಿನಗಳ ಕಾಲ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ನಂತರ ಮೃತ ಶವವನ್ನು ಮಂಜು ಮುಟ್ಟಿಳ್ಳಿ ಹಾಗೂ ಪೊಲೀಸ್ ಸಿಬ್ಬಂದಿಗಳು ಮುಟ್ಟಳ್ಳಿಯ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ಮಂಜು ಮುಟ್ಟಳ್ಳಿ, ಎ.ಎಸ್.ಐ ನವೀನ ಬೊರ್ಕರ್, ಪೊಲೀಸ್ ಸಿಬ್ಬಂದಿ ಸಿದ್ದು ಕಾಂಬ್ಳೆ ಹಾಗೂ ಮೂಢ ಭಟ್ಕಳ ಬೈಪಾಸ್ ನಿವಾಸಿ ರಾಜೇಶ ದೇವಾಡಿಗ ಉಪಸ್ಥಿತರಿದ್ದರು