ಕೀವ್​ ಸಮೀಪ ಸೇನಾ ಹೆಲಿಕಾಪ್ಟರ್ ಪತನ: ಗೃಹ ಸಚಿವರು ಸೇರಿ 16 ಮಂದಿ ಸಾವು

ಉಕ್ರೇನ್​: ಕೀವ್​ ಸಮೀಪದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು 16 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಉಕ್ರೇನ್ ಗೃಹ ಸಚಿವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಉಕ್ರೇನ್‌ನ ರಾಜಧಾನಿ ಕೈವ್ ಬಳಿಯ ಬ್ರೋವರಿ ಪಟ್ಟಣದ ಸೈನ್ಯ ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಉಕ್ರೇನ್‌ನ ಗೃಹ ಸಚಿವರು ಸೇರಿ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದ ಸಮಯದಲ್ಲಿ ನರ್ಸರಿಯಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಇದ್ದರು. ಎಲ್ಲರನ್ನೂ ಈಗ ಸ್ಥಳಾಂತರಿಸಲಾಗಿದ್ದು, 16  ಮಂದಿ ಮೃತಪಟ್ತಿದ್ದಾರೆ ಎಂದು ಕೈವ್ ಪ್ರದೇಶದ ಗವರ್ನರ್ ಒಲೆಕ್ಸಿ ಕುಲೆಬಾ ಟೆಲಿಗ್ರಾಮ್ ನಲ್ಲಿ ಬರೆದಿದ್ದಾರೆ.

ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ರಷ್ಯಾದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಉಕ್ರೇನಿಯನ್ ಅಧಿಕಾರಿಗಳು ಆ ಸಮಯದಲ್ಲಿ ಯಾವುದೇ ರಷ್ಯಾದ ದಾಳಿಯ ಕುರಿತು ಯಾವುದೇ ಉಲ್ಲೇಖವನ್ನು ಮಾಡಲಿಲ್ಲ.