ಅಗ್ನಿವೀರರ ಮೊದಲ ಬ್ಯಾಚ್ ಯುವಕರೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ.!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣ ಸಚಿವ ರಾಜಾನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಗ್ನಿವೀರರ ಮೊದಲ ಬ್ಯಾಚ್ ಯುವಕರೊಂದಿಗೆ ಸಮಾಲೋಚನೆ ನಡೆಸಿ ಶುಭ ಹಾರೈಸಿದ್ದಾರೆ.

ಮೊದಲ ಬ್ಯಾಚ್ ನಲ್ಲಿ ಆಯ್ಕೆಯಾಗಿರುವ 2,600 ಯುವಕರಿಗೆ ಆರಂಭದ 6-ತಿಂಗಳು ಕಾಲ ತರಬೇತಿ ನೀಡಿ ಭಾರತೀಯ ಸಶಸ್ತ್ರ ಸೇನೆಯ ಮೂರು ದಳಗಳಾಗಿರುವ ಭೂಸೇನೆ, ವಾಯದಳ ಮತ್ತು ನೌಕಾದಳಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಜ. 1 ರಿಂದ ನಾಸಿಕ್ ನಗರದಲ್ಲಿರುವ ಆರ್ಟಿಲರಿ ಸೆಂಟರ್ ನಲ್ಲಿ ಅಗ್ನಿವೀರರ ತರಬೇತಿ ಪ್ರಾರಂಭಗೊಂಡಿದೆ.

ನಾಸಿಕ್ ಆರ್ಟಿಲ್ಲರಿ ಸೆಂಟರ್ ನಲ್ಲಿ ಅಗ್ನಿವೀರರ ತರಬೇತಿಗಾಗಿ ಎಲ್ಲ ಮೂಲಭೂತ ಸೌಕರ್ಯಗಳಿವೆ. 2,600 ಜನಕ್ಕೆ ಅವಶ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ನಾಸಿಕ್ ಆರ್ಟಿಲ್ಲರಿ ಡಿಪೋದ ಲೆಫ್ಟಿನೆಂಟ್ ಕರ್ನಲ್ ಎಸ್ ಕೆ ಪಾಂಡಾ ಹೇಳಿದ್ದಾರೆ.

ಅಗ್ನವೀರರಿಗೆ ಒಟ್ಟು 31 ವಾರಗಳ ತರಬೇತಿ ನೀಡಲಾಗುವುದು. ಅದರಲ್ಲಿ ಮೊದಲ 10 ವಾರ ಮೂಲಭೂತ ತರಬೇತಿಯಾದರೆ ಮಿಕ್ಕಿದ 21-ವಾರ ಉನ್ನತ ಹಂತದ ತರಬೇತಿಯಾಗಿರುತ್ತದೆ. ಕಠಿಣ ಮತ್ತು ಪರಿಶ್ರಮದಾಯಕ ತರಬೇತಿಯ ಬಳಿಕ ಅವರನ್ನು ಯೋಧ, ತಾಂತ್ರಿಕ ಸಹಾಯಕ, ರೆಡಿಯೋ ಆಪರೇಟರ್ ಮತ್ತು ಡ್ರೈವರ್ ಗಳಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.