ನವದೆಹಲಿ: ಜಗತ್ತಿನ ಅತಿ ಉದ್ದನೆಯ ಮತ್ತು ಐಷಾರಾಮಿ ಗಂಗಾ ವಿಲಾಸ್ ಹಡಗನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ವಾರಾಣಸಿ ಗಂಗಾ ದಡದಲ್ಲಿನ ‘ಟೆಂಟ್ ಸಿಟಿ’ಯನ್ನೂ ಮೋದಿ ಉದ್ಘಾಟಿಸಿದ್ದಾರೆ.
ನದಿ ಮಾರ್ಗದಲ್ಲಿ ಸಾಗುವ ಈ ಐಷಾರಾಮಿ ಗಂಗಾ ವಿಲಾಸ್ ಹಡಗು ವಾರಾಣಸಿಯ ಗಂಗಾ ನದಿಯಲ್ಲಿ ಪ್ರಯಾಣ ಆರಂಭಿಸಿ ಬಾಂಗ್ಲಾದೇಶ ಮಾರ್ಗವಾಗಿ ಅಸ್ಸಾಂನ ದಿಬ್ರುಗಢದವರೆಗೆ ಪ್ರಯಾಣ ಮಾದಲಿದೆ. ಒಟ್ಟು 3200 ಕಿ.ಮೀ. ದೂರ ಸಾಗಲಿರುವ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರ, ಹೂಗ್ಲಿ ಸೇರಿ 27 ನದಿಗಳಲ್ಲಿ ಸಂಚರಿಸಲಿದ್ದು, ನದಿ ಅಕ್ಕಪಕ್ಕದ 50 ಪ್ರವಾಸಿ ತಾಣಗಳಲ್ಲಿ ನಿಲ್ಲಲಿದೆ.
ಇಂದು (ಜ.13) ಆರಂಭವಾಗುವ ಈ ಪ್ರಯಾಣ ಮಾ.1 ಕ್ಕೆ ಅಂತ್ಯವಾಗಲಿದೆ. 27 ನದಿಗಳಲ್ಲಿ ನೌಕಾಯಾನ ಮಾಡುವ ಮೂಲಕ ಆ ಭವ್ಯವಾದ ಕ್ಷಣಗಳನ್ನು ವೀಕ್ಷಿಸಲು ನೀವು 51 ದಿನಗಳ ಪ್ಯಾಕೇಜ್ ಬುಕ್ ಮಾಡಬಹುದು. ಈ ಹಡಗಿನಲ್ಲಿ ನೀವು ಉತ್ತಮ ಭೋಜನ, ಸ್ಪಾ ಮತ್ತು ಬಹು ವಿಶ್ರಾಂತಿ ಆಯ್ಕೆಗಳನ್ನು ಸಹ ಪಡೆಯಬಹುದಾಗಿದೆ.