ಸಂಭ್ರಮದ ಹೊಸ ವರ್ಷಾಚರಣೆ: ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ.!

ಬೆಂಗಳೂರು: ಕೋವಿಡ್ ನಿಂದಾಗಿ ಕಳೆದ ಮೂರು ವರ್ಷದಿಂದ ಹೊಸ ವರ್ಷವನ್ನು ಸಂಭ್ರಮಿಸಲಾಗದ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶ ಸಿಕ್ಕಿತ್ತು. ಹಾಗಾಗಿ ಇಡೀ ರಾಜ್ಯದ ಜನರು ರಾತ್ರಿಯಲ್ಲ ಕಣಿದು ಕುಪ್ಪಳಿಸುವ ಮೂಲಕ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು.

ಇನ್ನು ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್​ ಲಾಟರಿ ಹೊಡೆದಿದೆ. ಹೊಸ ವರ್ಷಕ್ಕೆ ಲಕ್ಷ ಲಕ್ಷ ಲೀಟರ್ ಮದ್ಯವನ್ನ ಪಾನಪ್ರಿಯರು ಹೊಟ್ಟೆಗಿಳಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ಐದು ದಿನದಲ್ಲಿ ಅಬಕಾರಿ ಇಲಾಖೆ ಭರ್ಜರಿ ಮದ್ಯ ಮಾರಾಟ ಮಾಡಲಾಗಿದೆ.

  • ಡಿ.27-3.57 ಲಕ್ಷ ಲೀಟರ್​ ಮದ್ಯ, 2.41 ಲಕ್ಷ ಬಿಯರ್​ ಮಾರಾಟ
  • ಡಿ.28-2.31 ಲಕ್ಷ ಲೀಟರ್​ ಮದ್ಯ, 1.67 ಲಕ್ಷ ಬಿಯರ್​ ಮಾರಾಟ
  • ಡಿ.29-2.31 ಲಕ್ಷ ಲೀಟರ್​ ಮದ್ಯ, 1.93 ಲಕ್ಷ ಬಿಯರ್​ ಮಾರಾಟ
  • ಡಿ.30-2.93 ಲಕ್ಷ ಲೀಟರ್​ ಮದ್ಯ, 2.59 ಲಕ್ಷ ಬಿಯರ್​ ಮಾರಾಟ
  • ಡಿ.31ರಂದು 3 ಲಕ್ಷ ಲೀಟರ್​ ಮದ್ಯ, 2.41 ಲಕ್ಷ ಬಿಯರ್​ ಮಾರಾಟ
  • ಡಿ. 31ರಂದು ಒಂದೇ ದಿನ 181 ಕೋಟಿ ಮೌಲ್ಯದ ಮದ್ಯ ಮಾರಾಟ
  • ಡಿ.23ರಿಂದ ಡಿ.31ರವರೆಗೆ 1,262 ಕೋಟಿ ಮೌಲ್ಯದ ಮದ್ಯ ಮಾರಾಟ
  • ಡಿ.23ರಿಂದ 31ರವರೆಗೆ 20.66 ಲಕ್ಷ ಲೀಟರ್ ಐಎಂಎಲ್​ ಮದ್ಯ ಮಾರಾಟ
  • ಡಿಸೆಂಬರ್ 23ರಿಂದ 31ರವರೆಗೆ 15.04 ಲಕ್ಷ ಲೀಟರ್ ಬಿಯರ್​​ ಮಾರಾಟ