ಬಿಗ್​ಬಾಸ್​​ ಸೀಸನ್​​​ 9 ರ ವಿನ್ನರ್ ಪಟ್ಟ ಅಲಂಕರಿಸಿದ ರೂಪೇಶ್​​​ ಶೆಟ್ಟಿ.!

ಬೆಂಗಳೂರು: ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​​​ 9 ರ ವಿನ್ನರ್ ಪಟ್ಟವನ್ನು​​ ರೂಪೇಶ್​​​ ಶೆಟ್ಟಿ ಅಲಂಕರಿಸಿದ್ದಾರೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಕ್ಕೆ ಅಭಿಮಾನಿಗಳು ಫುಲ್​​ ಖುಷ್​​ ಆಗಿದ್ದಾರೆ.

ಟಾಪ್ 5 ಫೈನಲಿಸ್ಟ್‌ಗಳಲ್ಲಿ ರೂಪೇಶ್ ಶೆಟ್ಟಿ ಕೂಡ ಒಬ್ಬರಾಗಿದ್ದು, ಇನ್ನುಳಿದ ಸ್ಪರ್ಧಿಗಳಾದ ರಾಕೇಶ್ ಅಡಿಗ, ದೀಪಿಕಾ ದಾಸ್, ರಾಜಣ್ಣಗೆ ಭಾರೀ ಪೈಪೋಟಿ ಕೊಟ್ಟು ವಿನ್ನರ್​​ ಆಗಿದ್ದಾರೆ. ರೂಪೇಶ್ ಶೆಟ್ಟಿ ಬಿಗ್​​ಬಾಸ್​​ ಸೀಸನ್​​ ವಿನ್ನರ್​​ ಆಗುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರೂಪೇಶ್​​ ಶೆಟ್ಟಿ ಫೋಟೋಸ್​​ ವೈರಲ್​​ ಆಗುತ್ತಿವೆ.

ಇನ್ನು ಬಿಗ್​​ಬಾಸ್​​ ಮನೆಯಲ್ಲಿ ಎಲ್ಲಾ ಟಾಸ್ಕ್​​​ಗಳನ್ನು ಆಡುತ್ತಿದ್ದ ರೂಪೇಶ್​​ ಶೆಟ್ಟಿ ಸಖತ್​​ ಆ್ಯಕ್ಟಿವ್​ ಆಗಿದ್ದರು. ಜೊತೆಗೆ ಮನೆಯಲ್ಲಿದ್ದ ಉಳಿದ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಬಿಗ್​​ಬಾಸ್​​ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದರು.

ಇನ್ನು ರೂಪೇಶ್​​ ಶೆಟ್ಟಿ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಗಿರಿಗಿಟ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಬಿಗ್​​ಬಾಸ್​​ ಒಟಿಟಿ ಸೀಸನ್​​​ 1 ರಲ್ಲಿ ವಿನ್ನರ್​​ ಆಗಿದ್ದರು. ಇದೀಗ ಬಿಗ್​​ಬಾಸ್​​ ಸೀಸನ್ ​​9 ರಲ್ಲಿ ವಿನ್ನರ್​​ ಆಗಿ ಹೊರ ಹೊಮ್ಮಿದ್ದಾರೆ.

ವಿನ್ನರ್ ರೂಪೇಶ್ ಶೆಟ್ಟಿ 60 ಲಕ್ಷ ರೂಪಾಯಿ ಗೆದ್ದಿದ್ದು, ಕಲರ್ಸ್ ಕನ್ನಡ ಕಡೆಯಿಂದ 50 ಲಕ್ಷ ಹಾಗೂ 10 ಲಕ್ಷ ರೂಪಾಯಿ ಸ್ಪಾನ್ಸರ್ ಹಣ ಸಿಗಲಿದೆ. ಈ ಮೊತ್ತಕ್ಕೆ ಶೇ. 30 ರಷ್ಟು, ಅಂದರೆ 18 ಲಕ್ಷ ರೂ. ಕಟ್ ಆಗಲಿದ್ದು, 42 ಲಕ್ಷ ರೂಪಾಯಿ ಸಿಕ್ಕಿದೆ.