ಸುಪಾರಿ ಪಡೆದು ಹರಿಯಾಣದ ಮಹಿಳೆಯ ಮಾನಹಾನಿ: ಖತರ್ನಾಕ್ ಹ್ಯಾಕರ್ ಅರೆಸ್ಟ್.!

ಹೊನ್ನಾವರ: ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋವನ್ನು ಎಡಿಟ್ ಮಾಡಿ, ಆಕೆಯ ಮೊಬೈಲ್‌ನಿಂದಲೇ ಆಕೆಯ ಸ್ನೇಹಿತರಿಗೆ ಕಳುಹಸಿದ ತಾಲೂಕಿನ ಹ್ಯಾಕರ್ ಅನ್ನು ಹರಿಯಾಣ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ. ಚಂದಾವರದ ಸೈಬರ್ ಗೈಡ್ ಇಮಾದ್ ಮುಲ್ಲಾ ಬಂಧಿತ ಆರೋಪಿ.

ಆರೋಪಿಯು ಬೆಂಗಳೂರಿನ ಖಾಸಗಿ ಕಂಪನಿಯೊoದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವರ್ಕ್ ಫ್ರಮ್ ಹೋಮ್ ಇರುವುದರಿಂದ ಚಂದಾವರದಲ್ಲೇ ಕುಳಿತು ಆನ್‌ಲೈನ್ ನಿಯಂತ್ರಣ ಮಾಡುತ್ತಿದ್ದ. ಆನ್‌ಲೈನ್ ಮೂಲಕ ಈತ ಏನು ಬೇಕಾದರೂ ಹ್ಯಾಕ್ ಮಾಡುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದ ಎನ್ನಲಾಗಿದ್ದು, ತನ್ನ ನೈಪುಣ್ಯತೆಯನ್ನು ಬಳಸಿಕೊಂಡು ಬೇರೆಯವರಿಂದ ಸುಪಾರಿ ಪಡೆದು ಮಹಿಳೆಯರ ಮಾನ ತೆಗೆಯುವ ಕೆಲಸ ಮಾಡುತ್ತಿದ್ದ.

ಈತನಿಗೆ ಯಾರಾದದರೂ ಫೋನ್ ನಂಬರ್ ನೀಡಿದರೆ ಸಾಕು ಅವರ ಜಾತಕವನ್ನೇ ತೆಗೆದಿಡುತ್ತಿದ್ದನಂತೆ. ಅಲ್ಲದೇ ಅವರ ಕಾಲ್ ಹಿಸ್ಟಿರಿ ಎಲ್ಲವನ್ನೂ ತೆಗೆದಿಡುತ್ತಿದ್ದನಂತೆ. ಅಲ್ಲದೆ, ಫೋಟೋ ನೀಡಿದರೆ, ಅವರ ಮುಖವನ್ನು ಬೆತ್ತಲು ದೇಹಕ್ಕೆ ಜೋಡಿಸುತ್ತಿದ್ದ ಎಂಬ ಆರೋಪವೂ ಇದೆ. ಅಲ್ಲದೆ, ಅವರ ಮೊಬೈಲ್ ನಂಬರ್‌ನಿಂದಲೇ ಸ್ನೇಹತರೆಲ್ಲರಿಗೂ ಹ್ಯಾಕ್ ಮಾಡಿ ಫೋಟೋ, ವಿಡಿಯೋವನ್ನು ಶೇರ್ ಮಾಡುತ್ತಿದ್ದ.

ಈ ಕೆಲಸ ಮಾಡಲು ಇಮಾದ್ ಗಂಟೆಗೆ 50 ಸಾವಿರ ರೂ. ಪಡೆಯುತ್ತಿದ್ದ ಎನ್ನಲಾಗಿದೆ. ಈತ ಬಳಿ 28 ಲಕ್ಷದ ಬಿ.ಎಂ. ಡಬ್ಲ್ಯು ಕಾರು, 24 ಲಕ್ಷದ ಬಿ.ಎಂ.ಡಬ್ಲ್ಯು ಬೈಕ್, ಇನ್ನೂ ಕೆಲವು ಬೈಕ್ ಗಳು ಇವೆ. ಸಣ್ಣದಾದ ಕಂಪನಿಯೊoದರಲ್ಲಿ ಕೆಲಸದಲ್ಲಿರುವ ಈತ ಐಶಾರಾಮಿ ಜೀವನವನ್ನು ಸಾಗಿಸುತ್ತಿದ್ದ. ಆದರೆ ಈತ ಸೈಬರ್ ಕ್ರೈಮ್‌ನಲ್ಲಿ ತೊಡಗಿಸಿಕೊಂಡಿರುವುದು ಸ್ಥಳೀಯರಿಗೆ ತಿಳಿದಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹರಿಯಾಣದ ಶ್ರೀಮಂತ ಮಹಿಳೆಯೋರ್ವಳ ನಗ್ನ ಚಿತ್ರವನ್ನು ಅವರ ಕಾಲ್ ಹಿಸ್ಟರಿಯಲ್ಲಿರುವ ಎಲ್ಲರಿಗೂ ಕಳುಹಿಸಿ ಆಗಾಗ ಮಾನ ಹಾನಿ ಮಾಡುತ್ತಿದ್ದ. ಈ ಕುರಿತು ಹರಿಯಾಣದಲ್ಲಿ ಸೈಬರ್ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದ ತನಿಖೆ ನಡೆಸಿದ ಹರಿಯಾಣ ಪೋಲಿಸರು, ಹೊನ್ನಾವರದ ಪೋಲಿಸರ ಸಹಾಯ ಪಡೆದು ಬಂಧಿಸುವಲ್ಲಿ ಇಮಾದ್ ನನ್ನು ಬಂಧಿರುವಲ್ಲಿ ಯಶಸ್ವಿಯಾಗಿದ್ದಾರೆ.