ಅಮೆರಿಕ: ಶೀತ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, 31 ಜನರನ್ನು ಬಲಿ ಪಡೆದಿದೆ. ಇದರಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದ್ದು, ಬಿರುಗಾಳಿಗೆ ಸಿಲುಕಿ ಲಕ್ಷಾಂತರ ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ಎದುರಾಗಿದೆ.
ನ್ಯೂಯಾರ್ಕ್ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ಅಡ್ಡಿಯುಂಟಾಗಿದೆ. ತೀವ್ರ ಹಿಮಪಾತದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಅಮೆರಿಕದ ಜನರು ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಕಂಗಾಲಾಗಿದ್ದಾರೆ. ಅಮೆರಿಕದಾದ್ಯಂತ ಅಪಘಾತ, ಮರಗಳು ಧರೆಗುರುಳಿ, ಚಂಡಮಾರುತದಿಂದಾಗಿ 30 ಜನರು ಸಾವನ್ನಪ್ಪಿದ್ದಾರೆ.
ಪರಿಸ್ಥಿತಿ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ಬಫಲೋ ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರದವರೆಗೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.
9 ರಾಜ್ಯಗಳಲ್ಲಿ 31 ಹವಾಮಾನ ಸಂಬಂಧಿತ ಸಾವುಗಳು ದೃಢೀಕರಿಸಲ್ಪಟ್ಟಿವೆ. ಕೊಲೊರಾಡೋದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಂಗಳವಾರದವರೆಗೆ ಮುಚ್ಚಲ್ಪಟ್ಟಿದೆ.
ದೇಶದ ರಸ್ತೆಗಳು ಹಾಗೂ ರಸ್ತೆ ಪಕ್ಕ ನಿಲ್ಲಿಸಿರುವ ವಾಹನಗಳು ಮಂಜಿನಲ್ಲಿ ಮುಚ್ಚಿಹೋಗಿವೆ. ವಾಷಿಂಗ್ಟನ್ನಿಂದ ಫ್ಲೋರಿಡಾದವರೆಗೆ ಹಲವು ರಾಜ್ಯಗಳಿಗೆ ತೀವ್ರ ಚಳಿ ಚಂಡಮಾರುತ, ಹಿಮಪಾತ, ಹಾಗೂ ಚಳಿಗಾಲದ ಹವಾಮಾನಕ್ಕೆ ಸಂಬಂಧಿಸಿದ ಇತರೆ ಎಚ್ಚರಿಕೆ ನೀಡಲಾಗಿದೆ.