ವಿದೇಶಿ ಸಿನಿಮೋತ್ಸವಗಳಲ್ಲಿ ಸದ್ದು ಮಾಡುತ್ತಿರುವ ‘ಆರ್​ಆರ್​ಆರ್​’.!

2022 ರಲ್ಲಿ ತೆರೆಕಂಡ ಅತ್ಯುತ್ತಮ ಸಿನಿಮಾಗಳ ಪೈಕಿ ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ನಿರ್ಮಾಪಕರ ಜೇಬು ತುಂಬಿಸಿದೆ. ವಿಶೇಷವೆಂದರೆ ಈ ಸಿನೆಮಾವು ಇನ್ನೂ ಕೂಡ ಅನೇಕ ಕಡೆಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಿದೆ.

ಈ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಬೇಕು ಎನ್ನುವ ಅಭಿಪ್ರಾಯದ ಮಧ್ಯೆಯೇ ‘ಆರ್​ಆರ್​ಆರ್​’ ಚಿತ್ರ ವಿದೇಶಿ ಸಿನಿಮೋತ್ಸವಗಳಲ್ಲಿ ಸದ್ದು ಮಾಡುತ್ತಿದೆ. ಸದ್ಯ ‘ಆರ್​ಆರ್​ಆರ್​’ ಚಿತ್ರ ‘ಫಿಲಡೆಲ್ಫಿಯಾ ಫಿಲ್ಮ್​ ಕ್ರಿಟಿಕ್ಸ್ ಸರ್ಕಲ್ ಆ್ಯನ್ಯುವಲ್ ಅವಾರ್ಡ್​​’ನಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಕುರಿತು ಸಿನಿಮಾದ ಅಧಿಕೃತ ಟ್ವಿಟರ್ ಖಾತೆ ಮೂಲಕ ಶೇರ್ ಮಾಡಿಕೊಳ್ಳಲಾಗಿದೆ. ಈ ವೇಳೆ ಅವಾರ್ಡ್​ ನೀಡಿದವರಿಗೆ ಧನ್ಯವಾದ ತಿಳಿಸಲಾಗಿದೆ. ಈ ಪೋಸ್ಟ್​ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ, ‘ಆರ್​ಆರ್​ಆರ್​’ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ಸಂಯೋಜನೆ ವಿಭಾಗದಲ್ಲಿ ಪ್ರಶಸ್ತಿಯನ್ನು ಸಹ ಬಾಚಿಕೊಂಡಿದೆ.

ಅಲ್ಲದೇ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ, ಅತ್ಯುತ್ತಮ ವಿಶ್ಯವಲ್​ ಎಫೆಕ್ಟ್ ಹಾಗೂ ಅತ್ಯುತ್ತಮ ಹಾಡು ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಸಿನಿಮಾ ನಾಮಿನೇಟ್​ ಆಗಿದೆ. 2022 ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ‘ಆರ್​ಆರ್​ಆರ್’ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಎನಿಸಿಕೊಂಡಿದೆ.

2023 ರ ಜನವರಿಯಲ್ಲಿ ‘ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​’ ಸಮಾರಂಭ ನಡೆಯಲಿದ್ದು, 5 ವಿಭಾಗಗಳಲ್ಲಿ ಯಾವೆಲ್ಲ ವಿಭಾಗಗಳಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಪ್ರಶಸ್ತಿ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.