ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಎತ್ತು: ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ ಆಟೋ ಚಾಲಕರು.!

ಭಟ್ಕಳ: ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಎತ್ತೊಂದನ್ನು ಗಮನಿಸಿದ ಶಿರಾಲಿ ಭಾಗದ ಕೆಲ ಆಟೋ ಚಾಲಕರು ಎತ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೆಲ ದಿನಗಳಿಂದ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 10 ರಿಂದ 15 ಜಾನುವಾರುಗಳಿಗೆ ಈ ಚರ್ಮ ಗಂಟು ರೋಗ ಕಾಣಿಸಿಕೊಂಡಿದ್ದು. ಆ ಪೈಕಿ ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಒಂದು ಎತ್ತನ್ನು ಗಮನಿಸಿದ ಶಿರಾಲಿಯ ಸ್ಥಳೀಯ ಆಟೋ ಚಾಲಕರಾದ ದೇವರಾಜ ದೇವಾಡಿಗ, ವಸಂತ ದೇವಾಡಿಗ, ಶಿವು ದೇವಾಡಿಗ, ದುರ್ಗೆಶ ನಾಯ್ಕ, ನಿತೀನ್ ನಾಯ್ಕ, ಚೇತನ ದೇವಾಡಿಗ, ದಾಮೋದರ ದೇವಾಡಿಗ, ಯುವರಾಜ್ ದೇವಾಡಿಗ, ತಿರುಮಲ ದೇವಾಡಿಗ ಎತ್ತಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಚರ್ಮ ಗಂಟು ರೋಗದ ಬಗ್ಗೆ ಶಿರಾಲಿ ಗ್ರಾಮ ಪಂಚಾಯತನಿಂದ ಸದ್ಯ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬೇರೆ ಗ್ರಾಮದ ಹಸುಗಳನ್ನು ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಗೆ ತರದಂತೆ ಹಾಗೂ ಚರ್ಮ ಗಂಟು ರೋಗ ಕಾಣಿಸಿಕೊಂಡ ಜಾನುವಾರುಗಳನ್ನು ಕೂಡಲೇ ಬೆಂಗ್ರೆ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವಂತೆ ಜನತೆಗೆ ತಿಳಿಸುತ್ತಿದ್ದಾರೆ.