80 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಸುನೀಲ್ ನಾಯ್ಕ

ಭಟ್ಕಳ: ತಾಲೂಕಿನ ಒಂದು ಪಟ್ಟಣ ಪಂಚಾಯತ ಹಾಗೂ ಒಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 80 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.

ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಹುರುಳಿಸಾಲ ಮಿನಿಹಿತ್ತಲ ರಸ್ತೆ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂಪಾಯಿ  ಹಾಗೂ ಶಿರಾಲಿ ಪಂಚಾಯತ ವ್ಯಾಪ್ತಿಯ ಮಣ್ಣೊಂಡ ರಸ್ತೆ ಮುಂದುವರಿದ ಕಾಮಗಾರಿಗೆ 30 ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿದ್ದು ಇವೆರಡೂ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದ್ದಾರೆ.