ಬೆಂಗಳೂರು: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪರೀಕ್ಷೆ (ನೀಟ್) ನಾಳೆ ದೇಶಾದ್ಯಂತ 497 ನಗರಗಳಲ್ಲಿ ನಡೆಯಲಿದೆ. ದೇಶಾದ್ಯಂತ ಒಟ್ಟು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು ಈ ಪೈಕಿ 10 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 1,19,626 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ನಾಳೆ ಮಧ್ಯಾಹ್ನ 2 ಗಂಟೆಯಿಂದ 5:20 ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗೆ ಹಾಜರಾಗಲು ಕಟ್ಟುನಿಟ್ಟಿನ ನಿಯಮ
- ಪರೀಕ್ಷೆಗೆ ಹಾಜರಾಗುವವರು ಯಾವುದೇ ಎಲೆಕ್ಟ್ರಾನಿಕ್ ವಸ್ತು ಕೊಂಡೊಯ್ಯುವಂತಿಲ್ಲ
- ಯಾವುದೇ ರೀತಿಯ ಆಭರಣ ಧರಿಸಿ ಪರೀಕ್ಷೆ ಬರೆಯುವಂತಿಲ್ಲ
- ನೀರಿನ ಬಾಟಲ್ ಕೊಂಡೊಯ್ಯುವುದು ನಿಷೇಧ
- ಉದ್ದ ತೋಳಿನ ವಸ್ತ್ರ, ಶೂಗಳನ್ನ ಧರಿಸುವಂತಿಲ್ಲ
- ವಿದ್ಯಾರ್ಥಿಗಳು ಪೆನ್, ಪೆನ್ಸಿಲ್ ತೆಗೆದುಕೊಂಡು ಬರುವಂತಿಲ್ಲ
- ಪರೀಕ್ಷಾ ಕೇಂದ್ರದಲ್ಲಿ ನೀಡುವ ಪೆನ್ ಬಳಸಿಯೇ ಪರೀಕ್ಷೆ ಬರೆಯಬೇಕು
- ಚಪ್ಪಲಿ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ ಎನ್.ಟಿ.ಎ ಸೂಚನೆ