ಪಂಜಾಬ್: ತರ್ನ್ ತರನ್ನ ಗಡಿ ಪ್ರದೇಶದ ಪೊಲೀಸ್ ಠಾಣೆಯ ಮೇಲೆ ಶಂಕಿತ ರಾಕೆಟ್ ಗ್ರೆನೇಡ್ ದಾಳಿ ನಡೆಸಲಾಗಿದೆ. ತರ್ನ್ ತರನ್ ಜಿಲ್ಲೆಯ ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿರುವ ಸರ್ಹಾಲಿ ಪೊಲೀಸ್ ಠಾಣೆಗೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಪೋಟಕ ಅಪ್ಪಳಿಸಿರುವುದಾಗಿ ತಿಳಿದು ಬಂದಿದೆ.
ಈ ದಾಳಿಯ ಹಿಂದೆ ಪಾಕಿಸ್ತಾನಿ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪರಿಚಿತ ದಾಳಿಕೋರರು ರಾಕೆಟ್ ಲಾಂಚರ್ ತರಹದ ಸಾಧನವನ್ನು ರಾಷ್ಟ್ರೀಯ ಹೆದ್ದಾರಿ 54 ರಿಂದ ಸರ್ಹಾಲಿಯ ಪೊಲೀಸ್ ಠಾಣೆಗೆ ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರಾಕೆಟ್ ದಾಳಿಯಿಂದಾಗಿ ಪೊಲೀಸ್ ಠಾಣೆಯ ಗೋಡೆಗಳು, ಬಾಗಿಲುಗಳ ಗ್ಲಾಸ್ಗಳು ಒಡೆದು ಹೋಗಿವೆ. ಘಟನಾ ಸ್ಥಳಕ್ಕೆ ತರ್ನ್ ತರನ್ನ ಎಸ್‌ಎಸ್‌ಪಿ ದಾಳಿ ನಡೆದ ಸ್ಥಳಕ್ಕೆ ಆಗಮಿಸಿ, ದಾಳಿಗೆ ಬಳಸಿದ ರಾಕೆಟ್ ವಶಕ್ಕೆ ಪಡೆದಿದ್ದಾರೆ. ರಾಕೆಟ್ ಜೊತೆಗೆ ಪೈಪ್ ತರಹದ ವಸ್ತು ಕೂಡ ಪತ್ತೆಯಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.