ಏಕದಿನ ಕ್ರಿಕೆಟ್​ನಲ್ಲಿ ಇಶಾನ್ ಕಿಶನ್ ಭರ್ಜರಿ ದ್ವಿಶತಕ.!

ಬಾಂಗ್ಲಾದೇಶ: ಬಾಂಗ್ಲಾ ವಿರುದ್ಧದ 3 ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿದ್ದಾರೆ. ರೋಹಿತ್ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದ ಕಿಶನ್ ಕೇವಲ 85 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಶತಕ ಬಾರಿಸಿದ್ದಾರೆ.

ಕಿಶನ್ ಆರಂಭದಿಂದಲೇ ಬಾಂಗ್ಲಾ ಬೌಲರ್​ಗಳ ಮೇಲೆ ದಾಳಿ ಆರಂಭಿಸಿದ್ದು, ಧವನ್ ವಿಕೆಟ್ ಬಳಿಕವೂ ಕೊಹ್ಲಿ ಜೊತೆಯಾಟದಲ್ಲಿ ಶತಕ ಸಿಡಿಸಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಓಪನಿಂಗ್ ಮಾಡಿರುವ ಕಿಶನ್, ಇದೇ ಅ. 11 ರಂದು ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಆ ಪಂದ್ಯದ ನಂತರ ಅವರಿಗೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಇದೀಗ ರೋಹಿತ್ ಗಾಯಗೊಂಡಿರುವ ಕಾರಣ ಬಾಂಗ್ಲಾದೇಶ ಪ್ರವಾಸದ ಮೂರನೇ ಏಕದಿನ ಪಂದ್ಯದಲ್ಲಿ ಕಿಶನ್​ಗೆ ಅವಕಾಶ ಸಿಕ್ಕಿದ್ದು, ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ.

ಟೀಂ ಇಂಡಿಯಾವು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ಗಳಿಸಿದೆ.