ಭಟ್ಕಳ: ಪರಶುರಾಮ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಮನೋಜ ನಾಯ್ಕ ಸ್ಮರಣಾರ್ಥವಾಗಿ ಡಿ. 24 ಮತ್ತು 25 ರಂದು ಅಂತರ್ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ಮೂಢ ಭಟ್ಕಳ ಬೈಪಾಸ್ ಸಮೀಪ ಆಯೋಜಿಸಲಾಗಿದೆ ಎಂದು ಪರಶುರಾಮ ಸ್ಫೋರ್ಟ್ಸ್ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಎಂ.ಬಿ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ ಪರಶುರಾಮ ಸ್ಫೋರ್ಟ್ಸ್ ಕ್ಲಬ್ ನ ಆಟಗಾರ ಮನೋಜ ನಾಯ್ಕ ಸ್ಮರಣಾರ್ಥ ಈ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. 1978 ರಿಂದ ಆರಂಭವಾದ ನಮ್ಮ ಸ್ಫೋರ್ಟ್ಸ್ ಕ್ಲಬ್ ಇಂದಿನವರೆಗೆ ಸಾರ್ಥಕವಾದ ಮತ್ತು ಸಕ್ರಿಯವಾಗಿ 44 ವರ್ಷದ ಕ್ರೀಡಾ ಅಭಿಯಾನವನ್ನು ಮುಗಿಸಿ 45ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ ಎಂದ ಅವರು
ನಮ್ಮ ಕ್ರೀಡಾ ಸಂಸ್ಥೆ ಹಲವು ಏಳು ಬಿಳುಗಳನ್ನು ಕಂಡರು ಸಹ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡುವುದನ್ನು ಮತ್ತು ಕ್ರೀಡೆಯಲ್ಲಿ ಭಾಗವಹಿಸುದನ್ನು ಎಂದಿಗೆ ನಿಲ್ಲಸಿಲ್ಲ.
ನಮ್ಮ ಸಂಸ್ಥಾಪನ ಸದಸ್ಯರಾದ ಜಟ್ಟಾ ನಾಯ್ಕ ಅತಿ ಸಣ್ಣ ವಯಸ್ಸಿನಲ್ಲೇ ಅಕಾಲಿಕ ಮರಣ ಹೊಂದಿರುವುದು ನಮ್ಮ ಪರಶುರಾಮ ಸ್ಫೋರ್ಟ್ಸ್ ಕ್ಲಬ್ ಗೆ ಮೊಟ್ಟೆ ಮೊದಲ ಆಘಾತವಾಗಿತ್ತು. ನಂತರ ಕುಮಾಟಾದಲ್ಲಿ ನಡೆದ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಬರುತ್ತಿರುವಾಗ ಆಟಗಾರರಿದ್ದ ವಾಹನ ಅಪಘಾತವಾಗಿದ್ದು ಇದು ನಮಗೆ ತಂಡ 2 ನೇ ಆಘಾತವಾಗಿದೆ. ಅದೇ ರೀತಿ ನಮ್ಮ ಪರಶುರಾಮ ಸ್ಫೋರ್ಟ್ಸ್ ಕ್ಲಬ್ ಅತ್ಯುತ್ತಮ ಆಟಗಾರ ಮೋನೋಜ ನಾಯ್ಕ ಕಳೆದ ವರ್ಷ ಹೃದಯಾಘಾತದಿಂದ ಸಾವನ್ನಪ್ಪದ್ದರು .ಇಂತಹ ಅನೇಕ ಏಳು ಬಿಳುಗಳನ್ನು ಕಂಡರು ಸಹ ಕ್ರೀಡೆಯಲ್ಲಿ ಭಾಗವಹಿಸುದನ್ನು ನಮ್ಮ ಸಂಸ್ಥೆ ಎಂದಿಗೂ ನಿಲ್ಲಿಸಿಲ್ಲ ಎಂದರು.
ಪಂದ್ಯಾವಳಿಯ ಪ್ರಥಮ ಬಹುಮಾನ 44,444 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 33,333 ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಮತ್ತು ಚತುರ್ಥ ಬಹುಮಾನ 11,111 ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ವೈಯಕ್ತಿಕ ಬಹುಮಾನ ಆಯೋಜಿಸಾಗಿದೆ. ಪಂದ್ಯಾವಳಿ ವೀಕ್ಷಿಸಲು ಉತ್ತಮವಾದ ಗ್ಯಾಲರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು. ಯಾವುದೇ ಟಿಕೆಟ್ ವ್ಯವಸ್ಥೆ ಇಲ್ಲದೆ ಪಂದ್ಯಾವಳಿ ವೀಕ್ಷಣೆ ಉಚಿತವಾಗಿದೆ ಎಂದರು.
ಉದ್ಘಾಟನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ , ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಪರಶುರಾಮ ಸ್ಫೋರ್ಟ್ಸ್ ಕ್ಲಬ್ ಆಟಗಾರರಾದ ಸುನೀಲ ನಾಯ್ಕ,ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಗಣೇಶ ನಾಯ್ಕ, ಕಾರ್ಯಾದರ್ಶಿ ದೇವರಾಜ ನಾಯ್ಕ, ಉಪಾಧ್ಯಕ್ಷ ಭಾಸ್ಕರ ನಾಯ್ಕ, ಸದಸ್ಯರಾದ ಮಾಸ್ತಪ್ಪ ನಾಯ್ಕ , ಯೋಗೇಶ ದೇವಾಡಿಗ ,ಸುಬ್ರಾಯ್ ನಾಯ್ಕ ,ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ರಾಘವೇಂದ್ರ ನಾಯ್ಕ, ಗಣಪತಿ ನಾಯ್ಕ, ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು