ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ ಅಮೀರ್ ಖಾನ್.! ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಫುಲ್ ವೈರಲ್.!

ಬಾಲಿವುಡ್​ನಲ್ಲಿ ಮಿಸ್ಟರ್​ ಪರ್ಫೆಕ್ಟ್​ ಎಂದೇ ಗುರುತಿಸಿಕೊಂಡಿರುವ ನಟ ಆಮಿರ್​ ಖಾನ್ ಇತ್ತೀಚಿನ ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರ ಹೀನಾಯ ಸೋಲು ಕಂಡಿತು. ಈ ಚಿತ್ರದ ಸೋಲಿಗೆ ನಟ ಅಮಿರ್​ ಖಾನ್​ ನೀಡಿದ ಕೆಲ ವಿವಾದಾತ್ಮಕ ಹೇಳಿಕೆಗಳು ಕಾರಣವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಹಿಂದೂ ವಿರೋಧಿ ಎಂದು ಕೂಡ ಅಮಿರ್​ ಖಾನ್​ ಟೀಕಿಗೆ ಒಳಗಾಗಿದ್ದರು. ಆದರೆ ಸದ್ಯ ಹಿಂದೂ ಸಂಪ್ರದಾಯದಂತೆ ಆಮಿರ್​ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್​ ಪೂಜೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್​ ಆಗಿದೆ.

ನಟ ಆಮಿರ್​ ಖಾನ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್​ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದಾರೆ. ಆಮಿರ್​ ಖಾನ್​ ಪೂಜೆ ಮಾಡುತ್ತಿರುವ ಫೋಟೋಗಳನ್ನು ನಿರ್ದೇಶಕ ಅದ್ವೈತ್ ಚಂದನ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಆಮಿರ್​ ಖಾನ್ ಅವರು ಹಣೆಗೆ ತಿಲಕ, ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕಲಶಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪತ್ನಿ ಕಿರಣ್​ ರಾವ್​ ಅವರು ಕೂಡ ಭಾಗವಹಿಸಿದ್ದರು.