ಚಿತ್ರದುರ್ಗ: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಯುವತಿಯೊಬ್ಬಳು ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿರುವ ಘಟನೆ ನಡೆದಿದೆ. ಹನಿ ಟ್ರ್ಯಾಪ್ ಗೆ ಯತ್ನಿಸಿದ ವಿಚಾರವಾಗಿ ಶಾಸಕ ತಿಪ್ಪಾರೆಡ್ಡಿ ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿವರ
ಅಕ್ಟೋಬರ್ 31ರ ಬೆಳಗ್ಗೆ ಸುಮಾರು ಎಂಟು ಗಂಟೆಗೆ ರಾಜಸ್ಥಾನ, ಒಡಿಶಾ ಭಾಗದಿಂದ ವಿಡಿಯೋ ಕಾಲ್ ಬಂದಿದೆ. ಮೊದಲಿಗೆ ಕಾಲ್ ಬಂದಾಗ ಶಾಸಕರು ರಿಸೀವ್ ಮಾಡಿದ್ದಾರೆ. ಕಾಲ್ ರಿಸೀವ್ ಆಗ್ತಿದ್ದಂತೆ ಯುವತಿ ತನ್ನ ಖಾಸಗಿ ಅಂಗಗಳನ್ನು ತೋರಿಸಲು ಪ್ರಾರಂಭಿಸಿದ್ದಾಳೆ. ತಕ್ಷಣ ಶಾಸಕರು ಫೋನ್ ಕಟ್ ಮಾಡಿ ಪಕ್ಕಕ್ಕೆ ಇಟ್ಟಿದ್ದಾರೆ. ನಂತರ ಅದೇ ಅಪರಿಚಿತ ನಂಬರ್ನಿಂದ ಅಶ್ಲೀಲ ವಿಡಿಯೋಗಳು ಬಂದಿವೆ. ಇದನ್ನ ನೋಡಿದ ಶಾಸಕರು ಅಶ್ಲೀಲ ವಿಡಿಯೋ ಡಿಲೀಟ್ ಮಾಡಿ, ನಂಬರ್ ಬ್ಲಾಕ್ ಮಾಡಿದ್ದಾರೆ.
ಯುವತಿ ಮೂರು ಬಾರಿ ವಿಡಿಯೊ ಕರೆ ಮಾಡಿದ್ದರು. ಕರೆ ಸ್ಥಗಿತಗೊಳಿಸಿ ಫೋನ್ ನಂಬರ್ ಬ್ಲ್ಯಾಕ್ ಮಾಡಿದ್ದೇನೆ. ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಶಾಸಕ ತಿಪ್ಪಾರೆಡ್ಡಿ ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಐಟಿ ಕಾಯ್ದೆಯ 66 (ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಸ್ಥಾನ ಅಥವಾ ಓಡಿಸಾ ರಾಜ್ಯದಿಂದ ವಿಡಿಯೊ ಬಂದಿರುವ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.