ಬೆಂಗಳೂರು: ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪಕ್ಕೆ ಸಿದ್ದು ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಸಿದ್ದರಾಮಯ್ಯ ಆರೋಪವನ್ನು ಲಂಚದ ಆರೋಪವನ್ನು ಅಲ್ಲಗಳೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಡಿದ ಸಿದ್ದು ನಾನು ಸೈಟ್ ಖರೀದಿ ಮಾಡಲು ಸಾಲ ತೆಗೆದುಕೊಂಡಿದ್ದು ಸತ್ಯ. ವಿವೇಕಾನಂದ ನನ್ನ ಸ್ನೇಹಿತ, ಅವರ ಬಳಿ ಸಾಲ ಪಡೆದಿದ್ದು ನಿಜ. ಸಾಲ ಪಡೆದು ನಾನು ಮೈಸೂರಿನಲ್ಲಿ ಸೈಟ್ ತೆಗೆದುಕೊಂಡಿದ್ದೇನೆ. ಸಾಲ ತೆಗೆದುಕೊಳ್ಳುವುದು ತಪ್ಪಾ.? ಎಂದು ಪ್ರಶ್ನಿಸುವ ಮೂಲಕ ಎನ್ಆರ್ ರಮೇಶ್ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಎನ್.ಆರ್.ರಮೇಶ್ ನನ್ನ ಮೇಲೆ 50 ಕೇಸ್ ದಾಖಲಿಸಿದ್ದಾನೆ. ಎಲ್ಲಾ ಕೇಸ್ಗಳು ವಜಾ ಆಗಿದೆ. ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.