ಬೆಂಗಳೂರು: ಮಂತ್ರಿ ಮಾಲ್ ಬಳಿ ಇರುವ ಮೆಟ್ರೋ ಕಾಂಪೌಂಡ್ ಕಾರುಗಳ ಮೇಲೆ ಕುಸಿತಗೊಂಡು 10 ಕ್ಕೂ ಹೆಚ್ಚು ಕಾರುಗಳು ಜಖಂ ಆದ ಘಟನೆ ನಡೆದಿದೆ.
ಮಾಲೀಕರು ಜೆಸಿಬಿ ಬಂದರೂ ಕಾರ್ ತೆರವು ಮಾಡಲು ಬಿಡದೇ, ಪರಿಹಾರ ಕೊಟ್ಟ ಮೇಲೆ ಕಾಂಪೌಂಡ್ ತೆರವು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಸ್ಥಳಕ್ಕೆ ಭೇಟಿ ನೀಡಿದ್ದು, ಜಖಂಗೊಂಡ ಕಾರುಗಳ ದುರಸ್ಥಿ ವೆಚ್ಚ ಕಲ್ಪಿಸಿಕೊಡಲು ಸಮ್ಮತಿಸಿದ್ಧಾರೆ. ಅತಿಯಾದ ಮಳೆ ಮತ್ತು ಭೂಮಿ ಸಡಿಲಿಕೆಯಿಂದ ಕಾಂಪೌಂಡ್ ಕುಸಿದಿದೆ. ಒಂದು ತಿಂಗಳಲ್ಲಿ ಕಾಂಕ್ರಿಟ್ನಿಂದ ಕಾಂಪೌಂಡ್ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.