ಮಹಾರಾಷ್ಟ್ರ: ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಪಿಎಫ್ಐ ಸಂಚು ರೂಪಿಸಿದ್ದರ ಬಗ್ಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. ರಾಮಮಂದಿರದ ಮೇಲೆ ಬಾಂಬ್ ದಾಳಿ ನಡೆಸಿ ಅದೇ ಜಾಗದಲ್ಲಿ ಮಸೀದಿ ನಿರ್ಮಿಸುವ ಆಲೋಚನೆಯನ್ನು ಪಿಎಫ್ಐ ಹೊಂದಿತ್ತು ಎನ್ನಲಾಗಿದೆ. ಇತ್ತೀಚೆಗೆ ದೇಶವ್ಯಾಪಿ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದ ವೇಳೆ ಮಹಾರಾಷ್ಟ್ರದ ಮಾಲೆಂಗಾವ್, ಪುಣೆ ಸೇರಿ ವಿವಿಧೆಡೆಯಿಂದ 35 ಮಂದಿಯನ್ನು ಬಂಧನ ಮಾಡಲಾಗಿತ್ತು. ಇವರ ವಿಚಾರಣೆ ವೇಳೆ ಆರೋಪಿಗಳು ರಾಮಮಂದಿರ ಸ್ಫೋಟಿಸುವ ಸಂಚಿನ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.