ಪೋಕ್ಸೋ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಭಟ್ಕಳ: 2014 ರ ಘಟನೆಯ ಪೋಸ್ಕೋ ಆರೋಪಿಯೋರ್ವ ಮನೆಯ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಹಡೀಲ್ ಸಬ್ಬತ್ತಿ ಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಾರಾಯಣ ಈರಪ್ಪ ನಾಯ್ಕ 64 ವರ್ಷ ಎಂದು ಗುರುತಿಸಲಾಗಿದೆ. ಈತನ
ಮೇಲೆ 2014 ರಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ
ಪೋಸ್ಕೋ ಪ್ರಕರಣ ದಾಖಲಾಗಿತ್ತು. ಪ್ರಕರಣವು ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಈ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಕಳೆದ 15 ದಿನದಿಂದ ತುಂಬಾ ಬೇಸರದಿಂದ ಇದ್ದು ಜೀವನದಲ್ಲಿ ಜಿಗುಪ್ಪೆಗೊಂಡು ಮನೆಯ ಹತ್ತಿರದಲ್ಲಿರುವ ಗೇರು ಪ್ಲಾಂಟೇಷನ್‌ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪ್ರಕರಣ ದಾಖಲಾಗಿದೆ.