2 ನೇ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಸೋತ ಟೀಂ ಇಂಡಿಯಾ

ಪರ್ತ್: ಟಿ20 ವಿಶ್ವಕಪ್‌ಗೂ ಮುನ್ನ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಮೊದಲ ಪಂದ್ಯವನ್ನು 13 ರನ್​​ನಿಂದ ಗೆದ್ದಿದ್ದ ಭಾರತ ತಂಡ 2 ನೇ ಪಂದ್ಯದಲ್ಲಿ 36 ರನ್​​ನಿಂದ ಸೋತಿದೆ.

ಟಾಸ್ ನಲ್ಲಿ​​ ಸೋತು ಬ್ಯಾಟಿಂಗ್​ ಮಾಡಿದ ಪಶ್ಚಿಮ ಆಸ್ಟ್ರೇಲಿಯಾ ತಂಡ 20 ಓವರ್​​ನಲ್ಲಿ 168 ರನ್​​​​ ಪಡೆದಿತ್ತು. ಟೀಂ ಇಂಡಿಯಾ ರವಿಚಂದ್ರನ್​​ ಅಶ್ವಿನ್​​ 3 ವಿಕೆಟ್​​ ತೆಗೆದು 35 ರನ್​​ ನೀಡಿದ್ದರು. ಪಶ್ಚಿಮ ಆಸ್ಟ್ರೇಲಿಯಾ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್​ ಕಳೆದುಕೊಂಡಿತ್ತು. ಕೆ.ಎಲ್​​ ರಾಹುಲ್​​ 55 ಬಾಲ್​​ನಲ್ಲಿ 2 ಬಿಗ್​​ ಸಿಕ್ಸರ್​​, 9 ಫೋರ್​​ ಬಾರಿಸಿ ಒಟ್ಟು 74 ರನ್​​ ಹೊಡೆದ್ರೆ. ಇದರ ಪರಿಣಾಮ ಟೀಂ ಇಂಡಿಯಾ 8 ವಿಕೆಟ್​​ಗೆ 132 ರನ್​ ಗಳಿಸಿ ಸೋತಿದೆ.