ಉಕ್ರೇನ್: ರಷ್ಯಾ ಸೇನೆ ಉಕ್ರೇನ್ ನ ಝಪೊರಿಝಿಯಾ ನಗರದ ಮೇಲೆ ಮಧ್ಯರಾತ್ರಿ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 17 ಮಂದಿ ಮೃತಪಟ್ಟಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಝಪೋರಿಝಿಯಾ ನಗರದ ಮೇಲೆ ಶನಿವಾರ ರಾತ್ರಿ ನಡೆದ ಕ್ಷಿಪಣಿ ದಾಳಿ ವೇಳೆ ಕನಿಷ್ಠ 20 ಮನೆಗಳು, ಸುಮಾರು 50 ಬಹುಮಹಡಿ ಕಟ್ಟಡಗಳು ಮತ್ತು ನಾಲ್ಕು ಶಿಕ್ಷಣ ಸಂಸ್ಥೆಗಳು ಹಾನಿಗೆ ಓಳಗಾಗಿವೆ. ಈವರೆಗೆ 17 ಮಂದಿ ಮೃತಪಟ್ಟಿದ್ದಾರೆ ಎಂದು ಝಪೊರಿಝಿಯಾ ಸಿಟಿ ಕೌನ್ಸಿಲ್‌ನ ಕಾರ್ಯದರ್ಶಿ ಅನಾಟೊಲಿ ಕುರ್ಟೆವ್ ಮಾಹಿತಿ ನೀಡಿದ್ದಾರೆ.