ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಅಕ್ರಮ ಶಿಕ್ಷಕರ ನೇಮಕಾತಿಯ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳಾದ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಪಿ ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಗೀತಾ ಮಾದೇಗೌಡ ಡಿಡಿಪಿಐ ಗಳಿಗೆ ಬರೆದ ಪ್ರತದಿಂದ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಅರ್ಹತೆ ಇಲ್ಲದ 12 ಶಿಕ್ಷಕರ ಹೆಸರನ್ನು ಪತ್ರದಲ್ಲಿ ಬರೆದು ನೇಮಕಾತಿ ಮಾಡುವಂತೆ ಡಿಡಿಪಿಐಗಳಿಗೆ ಪತ್ರ ಬರೆದಿದ್ದರು. ಮೇಲಾಧಿಕಾರಿಗಳು ಪತ್ರ ಬರೆದಿರುವುದರಿಂದ ಯಾವುದೇ ಪರಿಶೀಲನೆ ಮಾಡದೆ ಡಿಡಿಪಿಐಗಳು ನೇಮಕಾತಿ ಅದೇಶ ನೀಡುತ್ತಿದ್ದರು.
ಹಲವು ವರ್ಷಗಳಿಂದ ಸೆಕೆಂಡ್ ಲಿಸ್ಟ್ ನೇಮಕಾತಿಯನ್ನು ಅಧಿಕಾರಿಗಳು ಇದೇ ರೀತಿ ಮಾಡುತ್ತಿದ್ದ ಬಗ್ಗೆ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪ್ರತಿ ಬಾರಿ ನೇಮಕವಾದ ಲಿಸ್ಟ್ ಶಿಕ್ಷಕರ ಪರೀಶಿಲನೆಗೆ ಸಿಐಡಿ ಮುಂದಾಗಿದೆ. ಇದರ ಹಿನ್ನೆಲೆಯಲ್ಲಿ ಡಿಡಿಪಿಐ ಗಳಿಗೆ ಸೆಕೆಂಡ್ ಲಿಸ್ಟ್ ನಲ್ಲಿ ನೇಮಕವಾದ ಶಿಕ್ಷಕರ ವಿವರ ಹಾಗೂ ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಹೀಗಾಗಿ ಸಿಐಡಿ ಸದ್ಯದಲ್ಲೇ ಸೆಕೆಂಡ್ ಲಿಸ್ಟ್ ಶಿಕ್ಷಕರನ್ನು ಬಂಧನ ಮಾಡಲು ಮುಂದಾಗಿದೆ.