ಮೈಸೂರು ಅರಮನೆಯಲ್ಲಿ ಅದ್ಧೂರಿ ಆಯುಧ ಪೂಜೆ

ಮೈಸೂರು: ನಾಡಿನ ಹೆಮ್ಮೆ ಮೈಸೂರು ಅರಮನೆಯಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಇಂದು ಆಯುಧ ಪೂಜೆಯ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದ್ದು, ಆನೆಬಾಗಿಲ ಬಳಿ ರಾಜರ ಕಾಲದ ಫಿರಂಗಿಗಳಿಗೆ ಪೂಜೆ ಮಾಡಲಾಗಿದೆ.

ರಾಜ ಮನೆತನಕ್ಕೆ ಸೇರಿದ ಪಟ್ಟದ ಆನೆಗಳಾದ ಪ್ರೀತಿ, ಚಂಚಲಾಗೆ ಪೂಜೆ ನೆರವೇರಿಸಲಾಗಿದೆ. ಜೊತೆಗೆ ರಾಜರ ಐಷಾರಾಮಿ ಕಾರುಗಳಿಗೂ ಪೂಜೆ ನೆರವೇರಿದೆ. ರಾಜವಂಶಸ್ಥ ಯದುವೀರ್ ಹಳೆಯ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅರಮನೆಯ ಕಲ್ಯಾಣ ಮಂಟಪದಲ್ಲಿ ರಾಜರ ಕಾಲದ ಆಯುಧಗಳನ್ನ ಇಡಲಾಗಿದೆ. ಇದೇ ವೇಳೆ ಚಿನ್ನದ ಪಲ್ಲಕ್ಕಿ ಹಾಗೂ ಬೆಳ್ಳಿ ಪಲ್ಲಕ್ಕಿಗೂ ಪೂಜೆ ಮಾಡಲಾಯಿತು.