ನಟ ರಾಣಾ ದಗ್ಗುಬಾಟಿ ಆಫೀಸ್​ನಲ್ಲಿ ಪವರ್ ಸ್ಟಾರ್ ಪ್ರತಿಮೆ.! ಅಪ್ಪು ಅಭಿಮಾನಿಗಳಿಗೆ ಖುಷಿಯೋ ಖುಷಿ.!

ಪವರ್​ಸ್ಟಾರ್​ ಪುನೀತ್ ರಾಜ್ ಕುಮಾರ್ ಬರಿ ಕರ್ನಾಟಕದ ಆಸ್ತಿಯಲ್ಲ, ಜಗದಗಲದಲ್ಲೂ ಅಪ್ಪುಗೆ ಅಭಿಮಾನಿಗಳಿದ್ದಾರೆ. ತೆಲುಗು ನಟ ರಾಣಾ ದಗ್ಗುಬಾಟಿಗೆ ಅಪ್ಪು ಪ್ರತಿಮೆಯ ಗಿಫ್ಟ್ ಬಂದಿದ್ದು, ಈ ವಿಷಯವನ್ನು ರಾಣಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸಪಟ್ಟಿದ್ದಾರೆ.

ರಾಣಾ ದಗ್ಗುಬಾಟಿ ಕಛೇರಿಗೆ ಯಾರೋ ಉಡುಗೊರೆಯಾಗಿ ಅಪ್ಪು ಪುತ್ಥಳಿಯನ್ನು ಕಳುಹಿಸಿದ್ದಾರೆ. ಈ ಖುಶಿಯ ವಿಚಾರವನ್ನು ಸ್ವತಃ ರಾಣಾ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ಅತ್ಯಂತ ಸ್ಮರಣೀಯ ನೆನಪು, ಮಿಸ್​ ಯೂ ಗೆಳೆಯ ಅಂತ ಬರೆದುಕೊಂಡಿದ್ದಾರೆ. ರಾಣಾ ಟ್ವೀಟ್ ನೋಡಿದ ಅಪ್ಪು ಫ್ಯಾನ್ಸ್ ಖುಷಿಯಾಗಿದ್ದಾರೆ.