ಭಾರತದ ವಾಯುಪಡೆಗೆ ಆನೆಬಲ.! ವೈರಿ ರಾಷ್ಟ್ರಗಳಿಗೆ ನಡುಕ.!

ನವದೆಹಲಿ: ಭಾರತೀಯ ಸೇನೆಗೆ ಇಂದಿನಿಂದ ಮತ್ತಷ್ಟು ಬಲ ಹೆಚ್ಚಿದೆ. ಜೋಧಪುರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ 15 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದ್ದಾರೆ.

ದೇಶೀಯವಾಗಿ ನಿರ್ಮಿಸಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್​ನ ಕಾಪ್ಟರ್ಸ್​ ಸೇನೆಗೆ ಸೇರ್ಪಡೆಯಾಗಿದೆ. 15 ರಲ್ಲಿ 10 ವಾಯುಸೇನೆಗೆ ಸೇರ್ಪಡೆಯಾಗಿದ್ದು, 5 ಭೂಸೇನೆಗೆ ನೀಡಲಾಯಿತು. ವಿವಿಧ ವ್ಯಾಪ್ತಿಯ ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಲಾಂಚ್ ಮಾಡಲು ಸೇನೆಗೆ ಈ ಕಾಪ್ಟರ್‌ಗಳು ಹೆಚ್ಚಿನ ಬಲ ನೀಡಲಿವೆ.

ಹೆಚ್ಎಎಲ್ ಈ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸಿದ್ದು, ಸುಮಾರು 3 ಸಾವಿರದ 887 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೆಲಿಕಾಪ್ಟರ್‌ಗಳನ್ನ ತಯಾರಿಸಿದೆ. ಇವುಗಳನ್ನು ಅತಿ ಎತ್ತರದ ಪ್ರದೇಶದಲ್ಲೂ ನಿಯೋಜನೆ ಮಾಡಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ.

ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ಹೆಚ್ಎಎಲ್ ಈ ಹೆಲಿಕಾಪ್ಟರ್‌ಗಳನ್ನ ನಿರ್ಮಾಣ ಮಾಡಿದೆ. 2 ಜೋಡಿ ಎಂಜಿನ್‌ ಗಳನ್ನು ಈ ಕಾಪ್ಟರ್ ಗಳು ಹೊಂದಿದ್ದು, 5.8 ಟನ್ ತೂಕವನ್ನ ಹೊಂದಿವೆ. 20 ಎಂಎಂ ಟರೆಂಟ್‌ ಗನ್, 70 ಎಂಎಂ ಕ್ಷಿಪಣಿಯನ್ನೂ ಸಿಡಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಅತಿ ಎತ್ತರ ಪ್ರದೇಶವಾದ ಸಿಯಾಚಿನ್‌ನಲ್ಲೂ ದಾಳಿ ಮಾಡುವ ಹಾಗೂ ಮರುಭೂಮಿಯಲ್ಲೂ ಸಮರ್ಥವಾಗಿ ದಾಳಿ ನಡೆಸುವ ಬಲವನ್ನ ಈ ಲೈಟ್ ಕೋಂಬ್ಯಾಟ್ ಹೆಲಿಕಾಪ್ಟರ್‌ಗಳು ಹೊಂದಿವೆ. ಈಗಾಗಲೇ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳ ಫೈರಿಂಗ್‌ ಟೆಸ್ಟ್‌ಗಳಲ್ಲಿ ಎಲ್‌ಸಿಹೆಚ್ ಕಾಪ್ಟರ್‌ಗಳು ಯಶಸ್ವಿಯಾಗಿ ಸೇನಾ ಬಲವನ್ನು ಇಮ್ಮಡಿಗೊಳಿಸಿದೆ.