ಭಾರತದ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ಇರಾನಿ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ.! ವಿಮಾನದ ಮೇಲೆ ಕಣ್ಣಿಡಲು ಫೀಲ್ಡಿಗಿಳಿದ Su-30MKI ಫೈಟರ್ ಜೆಟ್

ನವದೆಹಲಿ: ಭಾರತದ ಏರ್​ ಸ್ಪೇಸ್​ನಲ್ಲಿ ಸಾಗುತ್ತಿದ್ದ ಇರಾನಿ ಮೂಲದ ಮಹಾನ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ದೊರೆತಿರುವುದು, ಭಾರೀ ಆತಂಕ ಸೃಷ್ಟಿಸಿತ್ತು. ಭದ್ರತಾ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಮಾಹಿತಿ ಸಿಗುತ್ತಿದ್ದಂತೆ ಇಂಡಿಯನ್ ಏರ್​ಫೋರ್ಸ್​ ಫುಲ್ ಅಲರ್ಟ್ ಆಗಿದ್ದು, ಎರಡು ಫೈಟರ್​ ಜೆಟ್​ಗಳು ಇರಾನಿ ವಿಮಾನದ ಮೇಲೆ ನಿಗಾ ಇಡಲು ಹರಸಾಹಸ ಪಟ್ಟಿತ್ತು.

ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆಯೇ ವಿಮಾನವನ್ನ ದೆಹಲಿಯಲ್ಲಿ ಲ್ಯಾಂಡ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಅನಾಹುತ ಸಂಭವಿಸಬಹುದು ಎನ್ನುವ ಎಚ್ಚರಿಕೆಯಿಂದ ದೆಹಲಿಯಲ್ಲಿ ಇರಾನ್ ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ನಿರಾಕರಿಸಲಾಯಿತು.

ಇರಾನ್ ವಿಮಾನದ ಮೇಲೆ ಕಣ್ಣಿಡಲು ಭಾರತ ಏರ್​ಫೋರ್ಸ್​ನ ಎರಡು ಸು-30MKI ಯುದ್ಧ ವಿಮಾನಗಳು ಕಾರ್ಯಾಚರಣೆಗೆ ಇಳಿದಿದ್ದವು. ಪಂಜಾಬ್ ಮತ್ತು ಜೋಧ್​ಪುರದಲ್ಲಿ ಇರಾನ್ ವಿಮಾನವನ್ನ ಟ್ರ್ಯಾಕ್ ಮಾಡಲು ಏರ್​ಫೋರ್ಸ್​ ವಿಮಾನಗಳು ಹರಸಾಹಸ ಪಟ್ಟಿವೆ ಎಂದು ಹೇಳಲಾಗಿದೆ. ಬಳಿಕ ಮಹಾನ್ ವಿಮಾನವು ಚೀನಾದ ಕಡೆಗೆ ತನ್ನ ಹಾರಾಟದ ಹಾದಿಯಲ್ಲಿ ಮುಂದುವರೆದಿದೆ ಎಂದು ತಿಳಿದು ಬಂದಿದೆ.