ಹರಿಯಾಣ: ಗುರುಗ್ರಾಮ್ ಉದ್ಯೋಗ್ ವಿಹಾರ್ ಹಂತ I ರಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಸೋಮವಾರ ಕಟ್ಟಡ ಕೆಡವುವ ವೇಳೆ ಈ ಅವಘಡ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಉದ್ಯೋಗ್ ವಿಹಾರ್ ಹಂತ 1 ರಲ್ಲಿ ಸೆ. 26 ರಿಂದ ಸೈಟ್‌ನಲ್ಲಿ ಕಟ್ಟಡ ನೆಲಸಮ ಕಾರ್ಯ ನಡೆಯುತ್ತಿದ್ದು, ಇಂದಿನವರೆಗೂ ಮೂರು ಅಂತಸ್ತಿನ ಕಾರ್ಖಾನೆಯ ಎರಡು ಮಹಡಿಗಳನ್ನು ಕೆಡವುವ ಕೆಲಸ ಮಾಡಲಾಗಿದೆ. ಕಟ್ಟಡದ ಅಂತಿಮ ಮಹಡಿ ಕುಸಿದಾಗ ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.