RSS ಪಥ ಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದ ಹಿರಿಯ ಜೀವಿ.! ಯುವಕರನ್ನೂ ನಾಚಿಸುವಂತೆ ಹೆಜ್ಜೆ ಹಾಕಿದ 85 ವರ್ಷದ ವೃದ್ಧರು.!

ಭಟ್ಕಳ: ಭಟ್ಕಳದಲ್ಲಿ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ಗಣವೇಷಧಾರಿ
ಸ್ವಯಂ ಸೇವಕರ ಭವ್ಯ ಪಥ ಸಂಚಲನದಲ್ಲಿ 85 ವರ್ಷದ ವೃದ್ಧರೊಬ್ಬರು ಪಾಲ್ಗೊಂಡಿದ್ದು ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು.

ಭಟ್ಕಳ ವಿವಿ ರೋಡ್ ನಿವಾಸಿಯಾದ 85 ವರ್ಷದ ವಿಠ್ಠಲ ಪ್ರಭು ಪಥ ಸಂಚಲನದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡ ಪಥ ಸಂಚಲನದಲ್ಲಿ ಅತಿ ಹೆಚ್ಚು ವಯಸ್ಸಿನರು ಇವರಾಗಿದ್ದಾರೆ.