ಗಾಂಜಾ ಮಾರುತ್ತಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ಖಾಕಿ ಬಲೆಗೆ.!

ಭಟ್ಕಳ: ಜಾಲಿ ರೋಡ್ ಕೋಲಾ ಗ್ರೌಂಡ್  ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ಆರೋಪಗಳನ್ನು  ಡಿವೈಎಸ್ಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಶೋಭರಾಜ ಓಡ, ಬಲರಾಮ ಓಡ ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಒಟ್ಟು ಸುಮಾರು 10,000 ರೂಪಾಯಿ ಬೆಲೆಬಾಳುವ 406 ಗ್ರಾಂ ತೂಕದ ಗಾಂಜಾವನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸರು ಇಬ್ಬರನ್ನು  ಬಂಧಿಸಿದ್ದಾರೆ. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.