ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ.!

ಭಟ್ಕಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಟ್ಕಳ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ
ಸ್ವಯಂ ಸೇವಕರಿಂದ ನಡೆದ ಭವ್ಯ ಪಥಸಂಚಲನಕ್ಕೆ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಚಾಲನೆ ನೀಡಿಲಾಯಿತು.

ಆರ್.ಎಸ್.ಎಸ್ ಗೀತೆ ಹೇಳುವ ಮೂಲಕ ಪಥ ಸಂಚಲನ ನ್ಯೂ ಇಂಗ್ಲಿಷ್ ಶಾಲಾ ಆವರಣದದಿಂದ ಪ್ರಾರಂಭವಾಯಿತು. ಪಥ ಸಂಚಲನ ಬಂದರು ರಸ್ತೆ, ಶಂಸುದ್ದಿನ್ ಸರ್ಕಲ್ ಮಾರ್ಗವಾಗಿ, ಹಳೆ ಬಸ್ ನಿಲ್ದಾಣ ಮೂಲಕ ರಾಜಾಂಗಣ , ರಘುನಾಥ ರಸ್ತೆ, ವಿವಿ ರೋಡ್, ನೆಹರೂ ರಸ್ತೆ, ಹೂವಿನ ಪೇಟೆ, ಮಾರಿಕಟ್ಟೆ, ಮಿಸ್ಬಾ ಕ್ರಾಸ್, ವಿಟಿ ರೋಡ್, ಸೋನಾರಕೇರಿ ಮಾರ್ಗವಾಗಿ ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಈ ಪಥ ಸಂಚಲನದಲ್ಲಿ ಸಣ್ಣ ಸಣ್ಣ ಮಕ್ಕಳು  ಭಾಗಿಯಾಗಿರುವುದು ವಿಶೇಷವಾಗಿತ್ತು.